ಒಂದಿಷ್ಟು ಹನಿಗಳು
ಕವನ
ಮೈಸೂರು ದಸರಾ
ಸಾಂಸ್ಕೃತಿಕ
ಮೇರು
ಪರಂಪರೆಯ
ಬೇರು;
ನಾಡ ಹಬ್ಬ
ಓ ದಸರಾ...
ಬನ್ನಿ
ನಾವೆಲ್ಲ ಸೇರಿ
ಎಳೆಯೋಣ
ಕನ್ನಡನಾಡಿನ
ಭವ್ಯತೆಯ
ಈ ತೇರಾ!
***
ರಾಜಕಾರಣಿಗಳಿಗೆ ಎಲ್ ಟಿ ಸಿ...!
ಕಚ್ಚಾಡುತಿರುವ
ಕರ್ನಾಟಕದ ಮಂತ್ರೀ
ಮಹೋದಯರೇ-
ನಿಮ್ಮ ಕಚ್ಛಾಟಕೆ
ಕೆಡುತಿದೆ
ನಮ್ಮ ನೆಮ್ಮದಿ...
'ರಷ್ಯಾ-ಉಕ್ರೇನ್
ಇಸ್ರೇಲ್-ಇರಾನ್'
ಪ್ರವಾಸವಾದರೂ
ಹೋಗಿ ಬನ್ನೀ-
ಕಡಿಮೆಯಾದೀತು
ನಿಮ್ಮ ಬೇಗುದಿ!
***
ಜೀವನ ಮೌಲ್ಯ
ಕೇವಲ ಹಣ
ಸಂಪತ್ತಿನ
ಹಿಂದೆ
ಹೋದರೆ
ಮೆಚ್ಚದೋ
ಈ ಲೋಕ...
ಜೀವನ
ಮೌಲ್ಯಗಳ
ಹಿಂದೆ
ಓಡಿದರೆ
ಸಿಗುವುದೋ
ಭವ್ಯ ನಾಕ!
***
ರಾಜಕಾರಣ ಮತ್ತು ದುಡಿಮೆ!
ರೈತನ;
ಕಾರ್ಮಿಕರ-
ದುಡಿಮೆ ಗೊತ್ತು;
ಸರ್ಕಾರೀ
ನೌಕರರ
ಗಳಿಕೆಯೂ ಗೊತ್ತು...
ಈ ರಾಜಕಾರಣಿಗಳ
'ದುಡಿಮೆ' -
ಎಂಬ ಮಾತನು
ಕೇಳಿ-
ಎಲ್ಲರ ತಲೆಯೇ
ತಿರುಗಿತ್ತು!
***
ದರೋಡೆ!
ಈ ಚೆಂದದ
ರಾಜಕಾರಣಕೆ-
'ದುಡಿಮೆ'
ಎಂಬುದಿಲ್ಲ
ಓ ನನ್ನ
ಕಂದ...
ಅವರೆಲ್ಲಾ
'ದರೋಡೆ'
ಮಾಡೇ-
ಪಡುವರು
ಭರ್ಜರಿ
ಆನಂದ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್