ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ರಾಜಕಾರಣಿಗಳು ಮತ್ತು ಫ್ರೀ....

ಪ್ರಜಾ ಪ್ರಭುತ್ವದ

ಗಂಡುಗಲಿಗಳಾ-

ನಮ್ಮ ರಾಜಕಾರಣಿಗಳು

ಬರೀ ದುಡ್ಡಿನ ಹಿಂದೇ

ಹೋಗುವ ದಡ್ಡರೆಂದು

ಭಾವಿಸಿದೀರಾ...?

 

ಅವರು ಓಡುವುದು

ಹಣದ ಹಿಂದೆಯಾದರೂ-

ಅವರಿಗೆ

ಪುಕ್ಕಟೆಯಾಗಿ

ಸಿಗುವುದು ಮಾತ್ರ

'ಜನಪ್ರಿಯತೆ' ಕಂಡಿರಾ!

***

ನೀನು ಮತ್ತು ದೇವ 

ಈ ಜಗದಲಿ

ಹಣ ಮತ್ತು

ಶ್ರೀಮಂತಿಕೆಯನು

ನೀನೇ

ಗಳಿಸಬಹುದೋ

ಮಾನವಾ...

 

ಆದರೆ

ಆರೋಗ್ಯ

ಕೊಡುವವ

ಮಾತ್ರ-

ಆ ಮೇಲಿರುವ

ದೇವಾ!

***

ಭವ್ಯ ಭಾರತ 

ಧರ್ಮ ಅರ್ಥ ಕಾಮ

ಮೋಕ್ಷಗಳಿಗೊಂದು

ಭವ್ಯ ರೂಪ 

ಕೊಟ್ಟು ಬೆಳಗಿ

ಸನ್ಮಾರ್ಗ ತೋರಿದ

ಹೇ ಭವ್ಯ ಭಾರತ...

 

ಋಷಿ ಮುನಿಗಳ

ಪರಂಪರೆ; ಸರ್ವಸಂಗ

ಪರಿತ್ಯಾಗಿಗಳ

ಸಾಕ್ಷಾತ್ಕಾರ ಕಂಡ

ಅದ್ಭುತ ದೇಶವೇ

ಚಲಿಸುತ್ತಿರುವೆ ನೀನೆತ್ತ?

***

ಆಯುಧ ಪೂಜೆ 

ವರ್ಷಕೆ ಒಮ್ಮೆಯಾದರೂ

ನಿಮ್ಮ ವಾಹನಗಳ;

ಆಯುಧಗಳ;

ಮನಸ್ಸುಗಳ-

ಶುಚಿಯಾಗಿಟ್ಟುಕೊಂಡು

ಸಂಭ್ರಮಿಸಿರೋ...

 

ಎಂದು ಮಹಾ

ಸಂದೇಶ ಸಾರುವ

ಶುಚಿತ್ವದ

ಪರಂಪರೆಯೇ

ನಮ್ಮೆಲ್ಲರ ಸಡಗರದ

'ಆಯುಧ ಪೂಜೆ' ಹಬ್ಬವೋ!

***

ಬಹು ಪರಾಕ್ 

ದೇವರು ಧರ್ಮ

ಭಕ್ತಿ ಪರಂಪರೆ

ಸಂಪ್ರದಾಯಗಳು

ಇಲ್ಲದೇ

ಹೋಗಿದ್ದರೆ ಇತ್ತಲ್ಲ-

ಭಯಾನಕ ಝಲಕ್...

 

'ಜಗದ ಜನ

ಸತ್ಸಂಪ್ರದಾಯದಿಂದ

ಮರೆಯಾಗಿ

ಎಂದೋ 

ಹುಚ್ಚರಾಗುತ್ತಿದ್ದರಲ್ಲೋ'

ಬಹುಪರಾಕ್!

***

ವಾಗ್ದಾಳಿ 

ರಾಜಕಾರಣಿಗಳೇ-

ಹಬ್ಬ 

ಹರಿದಿನಗಳಲ್ಲಾದರೂ

ನಿಮ್ಮ 

ವಾಗ್ದಾಳಿಯನ್ನು

ನಿಲ್ಲಿಸಿ...

 

ಆ ದೇವರ

ಆಶೀರ್ವಾದಗಳಿಸಲು

ಒಂಡೆರೆಡುದಿನ-

ಎಲ್ಲಾ ಮರೆತು

ಜನಸಾಮಾನ್ಯರೊಲು

ಜೀವಿಸಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್