ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಆಡಳಿತದ ಅಂಬೋಣ 

ನೈತಿಕತೆ ಇದ್ದರೆ

ರಾಜೀನಾಮೆ ಕೊಡಿ-

ಎಂದು ಹಗಲೆಲ್ಲಾ

ಹೇಳಬೇಡಿ

ವಿರೋಧ ಪಕ್ಷದವರೇ-

ನಮಗೆ ನಾಚ್ಕೆ...

 

ಇವುಗಳ

ಬಿಟ್ಟ ಮೇಲೇ-

ನಮ್ಮ-ನಿಮ್ಮ 

ರಾಜಕೀಯ ಪ್ರವೇಶ; 

ನಮ್ಮಿಂದ ಇವೆಲ್ಲಾ 

ಊರಿಂದಾಚ್ಗೆ!

***

ಯುದ್ಧದ ಭಾಷ್ಯ 

ಹಿಂದೆಲ್ಲಾ-

ಸೈನಿಕರ

ಕೊಂದು

ಕೋಟೆಗಳ

ವಶಪಡಿಸಿಕೊಳ್ಳುವುದೇ

ಯುದ್ಧ...

 

ಇಂದು- 

ನಗರಗಳ ಕೆಡವಿ;

ನಾಗರೀಕರ ಕೊಂದು-

ಜೀವಂತ ಶ್ಮಶಾನ

ಮಾಡುವುದಕ್ಕೇ

ಅದು ಬದ್ಧ!

***

ತಾಯ್ನಾಡ ಕರೆ 

ಕುಮಾರ ಸ್ವಾಮಿ-

2028ರ

ಒಳಗೆ

ಮತ್ತೆ

ನಾನೇ

ಸಿಎಂ...

 

ಪಿತೃ ಪ್ರೀತಿ

ತಾಯ್ನಾಡ ಕರೆ

ಮಗನ ಮಮತೆ

ಎಲ್ಲಾ ಸೇರಿ-

ಹೇಳಿಬಿಡುವುದೇ

ವೆಲ್ಕಂ...?

***

ಧೃತರಾಷ್ಟ್ರ ಪ್ರೇಮ 

ಈ ರಾಜಕೀಯವೂ

ವಂಶಪಾರಂಪರ್ಯದ

ದ್ಯೋತಕವೇ-

ತಾತನಿಂದ ಮಗ

ಮಗನಿಂದ ಮರಿಮಗ

ಹೀಗೆಯೇ ನೂಕಿ...

 

ಮಗನಿಗೆ

ರಾಜಕೀಯ

ಪಥ

ತೋರದಿದ್ದವನೇ-

ಈ ಲೋಕದಲಿ

ಪರಮ ಪಾಪಿ!

***

ಮುಳುಗಿದ ಬೆಂಗಳೂರು 

ಕೆರೆಗಳನು

ಅತಿಕ್ರಮಿಸಿ

ಅಪಾರ್ಟ್ಮೆಂಟ್

ಕಟ್ಟಿ

ಮಾಡಿದಿರಿ

ಅಪರಾಧ...

 

ಆಗಿನ

ಜೀವನಾಡೀ

ಸರೋವರಗಳೀಗ-

ತೋರುತಿಹವು

ಮುಳುಗಡೆಯ

ಪ್ರತಿರೋಧ!

***

ಗೋಸುಂಬೆಗಳು 

ರಾಜಕೀಯದಲಿ

ಯಾರೂ ಶತ್ರುಗಳಲ್ಲ

ಮಿತ್ರರೂ ಅಲ್ಲ...

ಅವರೆಲ್ಲಾ

ಗೆದ್ದೆತ್ತಿನ ಬಾಲ

ಹಿಡಿವವರು...

 

ಶಾಶ್ವತ

ಶತ್ರುಗಳಾಗುವವರು

ಮಾತ್ರ-

ಅವರನ್ನು

ಬೆಂಬಲಿಸಿದ

ಮುಗ್ಧ ಜನರು!

***

ಯಾರದೋ ಪ್ರಾಣ ಯುದ್ಧವೆಂಬೋ ಜಾತ್ರೆ 

ಹಿಂದೆಲ್ಲಾ

ರಾಜ ಮಹಾರಾಜರೇ

ಯುದ್ಧದ

ಮುಂದಾಳು-

ದೇಶಕಾಗಿ

ಹೋರಾಟ...

 

ಈಗಿನ

ರಾಷ್ಟ್ರನಾಯಕರದು-

ಕುಳಿತಲ್ಲಿಂದಲೇ

ಸೈನಿಕರ ದಬ್ಬಿ

ಅವರ ಪ್ರಾಣದ

ಜೊತೆ ಚೆಲ್ಲಾಟ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್