ಒಂದಿಷ್ಟು ಹನಿಗಳು..

ಒಂದಿಷ್ಟು ಹನಿಗಳು..

ಕವನ

ಅಳಬೇಡ ತಮ್ಮ...

ನಾನು

ಯಾರಿಗೂ

ಇಷ್ಟವಾಗುತ್ತಿಲ್ಲ

ಎಂದು-

ಗಳಗಳ

ಅಳಬೇಡ ದಡ್ಡಾ...

 

ಎಲ್ಲರಿಗೂ

ಇಷ್ಟವಾಗಲು

ನೀನೇನು

ಸರ್ವಪ್ರಿಯ

ಝಣ ಝಣ

ಮೌಲ್ಯದ ದುಡ್ಡಾ?

***

ಎಂಥಾ ಮೋಜಿನ ಕುದರೀ...?  

ಎಂಥಾ

ಮೋಜಿನ

ಕುದುರಿ

ಈ ರಾಜಕೀಯ-

ಹಡದಿ ತಿರುಗುವ

ಬುಗುರಿ...

 

ಪಾಪದ ಹಣವ

ಮೇಯುತ್ತಾ

ಅಂಡಲೆಯುವ

ಇದಕೆ- 

ಮಾಡಿದ್ದೇ 

ಚಾಕರಿ!

***

ಸ್ವಯಂಕೃತಾಪರಾಧ 

ಈ ಜಗದಲಿ

ಮನುಷ್ಯ

ತಾನು

ಹಾಳಾಗುವುದು-

ತನ್ನ ದುಶ್ಚಟ

ದೌರ್ಬಲ್ಯಗಳಿಂದ....

 

ಅದನು

ಬೇರೆಯವರ

ಮೇಲೆ

ಹಾಕಿ-

ಪಡುವಿರೇಕೆ

ಆನಂದ?

***

ಟ್ರಂಪ್ ವಿಜಯ.. 

ಕುಟಿಲ

ಅಮೇರಿಕಾದ

ಕಾಠೀಣ್ಯತೆಗೆ-

ಕಮಲವರಳುವುದು;

ಲೋಕ ನಗುವುದು

ಬೇಕಿರಲಿಲ್ಲವೇನು...?

 

ಅದಕೆ-

ಸಿರಿವಂತಿಕೆಯ

ವ್ಯವಹಾರ ತಜ್ಞ;

ಪ್ರಪಂಚದ

ಮಿಲಿಟರಿ ಪೂರಣಕೆ

ಟ್ರಂಪೇ ಬೇಕಿತ್ತೇನೋ?

***

ತೆರೆದ ಪುಸ್ತಕ 

ನೀವು-

ತೆರೆದು 

ಕೊಂಡಾದರೂ ಇರಿ;

ಮುಚ್ಚಿ

ಕೊಂಡಾದರೂ ಇರಿ- 

ಅದು ನಿಮ್ಮ ಕಂಫರ್ಟ್...

 

ಆದರೆ-

ಮಹಾ ಸರಸ್ವತಿ

ಪುಸ್ತಕ ದೇವತೆಗೆ

ಮಾತ್ರ ನಿಮ್ಮನ್ನು

ಹೋಲಿಸಿಕೊಳ್ಳದಿರಿ

ಪೊಲಿಟಿಕಲ್ ಬ್ರದರ್ಸ್!

***

ನೋ ರಿಟೈರ್ಮೆಂಟ್ 

ಸರ್ಕಾರೀ

ನೌಕರರಿಗೆ

ಖಾಯಂ ನಿವೃತ್ತಿ;

ಖಾಸಗೀ

ಕೆಲಸಗಾರರೂ

ಹೋಗುವರು ಬತ್ತಿ...

 

ಈ ರಾಜಕಾರಣಿಗಳಿಗೆ

ಮಾತ್ರ ಎಂದೂ

ಬತ್ತದ ಶಕ್ತಿ;

ಬದುಕಿರುವವರೆಗೂ

ಗಳಿಸಿದ್ದನ್ನು

ಉಳಿಸುವ ಕುಯುಕ್ತಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್