ಒಂದಿಷ್ಟು ಹನಿಗಳು !
ಪೂಜಾ ಉದ್ದೇಶ್ಯ...
ಹೊಟೆಲ್; ಮಾಲ್
ಬಾರ್ಗಳಲ್ಲಿ
ದೇವರ ಫೋಟೋ
ಇಟ್ಟು ಹೂ ಮುಡಿಸಿ
ಮಾಡುವರು
ಭಕ್ತಿಯ ಪೂಜೆ...
ಈ ಸಂಪ್ರದಾಯ-
ಸರ್ಕಾರೀ ಕಛೇರಿಗಳಲ್ಲೂ!
ಅವರದ್ದೋ
ನಿರ್ದಿಷ್ಟ ಲಾಭ;
ಇವರದ್ದೋ ಇಂತಿಷ್ಟೇ
ಲಂಚದ ಸಜೆ!
***
ಸೌಂದರ್ಯ ಶೀಲ ಕನ್ನಡ!
ಕನ್ನಡ ಸಿನಿಮಾಗಳಿಗೆ
ಇಂಗ್ಲೀಷ್ ಭಾಷೆಯ
ಶಿರೋನಾಮೆಗಳ ಇಟ್ಟು-
ಜನರನು
ಆಕರ್ಷಿಸಬಹುದೆಂದು
ಮಾಡುತಿಹರು ಸಂಚು...
ಅಯ್ಯೋ ಹುಚ್ಚರಾ-
ನಿಮಗೆ ಕಾಣದೆ
ಅಚ್ಚ ಕನ್ನಡ
ಹೊನ್ನ ಭಾಷೆಯ
ಸೌಂದರ್ಯದ
ಮಹೋನ್ನತ ಕುಚ್ಚು!
***
ಕೈವಾಡ....
ವೀಡಿಯೋ ಕೊಟ್ಟರೆ
ಲ್ಯಾಬ್ ಗೆ ಕಳಿಸುವೆ-
ಹೊರಟ್ಟಿ;
ಲ್ಯಾಬ್ ನಲ್ಲೂ
ಕೈವಾಡ ಶಂಕೆ-
ಸಿ ಟಿ ರವಿ...
ಅಯ್ಯೋ
ಮಹಾಶಯ-
ವಿರೋಧ
ಪಕ್ಷವೆಂದಮೇಲೆ
ಎಲ್ಲದರಲ್ಲೂ
ಕೈವಾಡವೇ ಮರೀ!
***
ಅಣ್ಣಾ ಮಲೈ...
ಡಿಎಂಕೆಯನ್ನು
ಅಧಿಕಾರದಿಂದ
ಕೆಳಗಿಳಿಸುವತನಕ
ಚಪ್ಪಲಿ
ತೊಡೋಲ್ಲಾ-
ಅಣ್ಣಾ ಮಲೈ...
ಇದು-
ಸರ್ಕಾರದ
ಅಧಿಕಾರವಲ್ಲ ಅಣ್ಣಾ...
ಆದರೆ ಪಕ್ಕಾ
ರಾಜಕಾರಣದ
ಸ್ಟೈಲೇ!
***
ಪ್ರತಿಭಟನೆ
ಅಂಗಿ ಬಿಚ್ಚಿ
ಮನೆ ಮುಂದೆ-
ಚಾಟಿಯಲ್ಲಿ
ಥಳಿಸಿಕೊಂಡು
ಪ್ರತಿಭಟಿಸಿದ
ಅಣ್ಣಾಮಲೈ...
ಅಯ್ಯೋ ಮಾಜೀ
ಪೋಲಿಸ್ ಅಧಿಕಾರಿ-
ಕರ್ನಾಟಕದಲ್ಲಿ
ಸುಂದರ ಪೋಲಿಸ್
ಡ್ರೆಸ್ನಲ್ಲಿದ್ದ ನಿಮಗೆ
ಏಕೀ ರಾಜಕೀಯ ತಕಥೈ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ