ಒಂದಿಷ್ಟು ಹನಿಗಳು...
ಕವನ
ಪ್ರಕೃತಿ ಮಾತೆ ನಿನಗೆ ಶರಣು
ಗರ್ಭದಲಿ
ಅದೆಷ್ಟು
ರಹಸ್ಯಗಳ
ಇಟ್ಟುಕೊಂಡಿಹಳೋ
ನಮ್ಮ ಹೆತ್ತ
ಈ ಧಾರಿಣೀ...
ನೋಡಲು
ಕಣ್ಮನ
ತಣಿಸಿ ಎಮ್ಮ
ಸಲಹುತಿಹಳು
ಈ ಪ್ರಕೃತಿಯೆಂಬ
ಮನಮೋಹಿನಿ!
***
ತಾಯಿ
ಈ ಸುಂದರ
ಜಗವ
ನನಗೆ
ಪರಿಚಯಿಸಿದ
ಓ ನನ್ನ
ಮಾತಾ...
ನಿನ್ನ ಪ್ರೀತಿ
ಕಾಳಜಿ
ಅಂತರಂಗದ
ಅಭಿಮಾನ-
ಈ ಜಗದಲೇ
ಪರಮ ಹಿತಾ!
***
ಬಗಲ್ ಮೇ ಹೈ
ಮುಖ್ಯಮಂತ್ರಿ
ಎಚ್ಚರಿಕೆ-
ರಿಯಲ್
ಎಸ್ಟೇಟ್ ದಂಧೆಗೆ
ಸಹಕರಿಸಿದರೆ
ಹುಷಾರ್...
ದುಷ್ಮನ್
ಕಹಾಂ ಹೈ...
ಅಂದರೆ
ಬಗಲ್ ಮೇ ಹೈ-
ಎಂದು ಹೇಳಿ
ಯಾರೋ ನಕ್ಕರ್!
***
ಋಣಾನುಬಂಧ...
ಆ ಕಾಲದ
ಮಹಾನ್ ನುಡಿ-
ಋಣಾನುಬಂಧ
ರೂಪೇಣ
ಪಶು ಪತ್ನಿ
ಸುತಾಲಯ...
ಈ ಕಾಲಕ್ಕೆ-
ನಿಮ್ಮದೇ ಆಗುವ
ವೃತ್ತಿ ; ವಾಹನ
ಟಿವಿ ; ಮೊಬೈಲ್
ಹೋಟೆಲ್; ಫ್ರೆಂಡ್ಸ್
ಬ್ಯಾಂಕಾಲಯ!
***
ಕುಬ್ಜ ಮಾನವ
ಲಾಸ್ ಏಂಜಲೀಸ್ನಲ್ಲಿ
ಕಾಳ್ಗಿಚ್ಚಿನ ಅಬ್ಬರ
ಹತ್ತು ಜನರ ಬಲಿ
ಹತ್ತು ಸಾವಿರ
ಮನೆಗಳು ಭಸ್ಮ
ಉಪ ನಗರವೇ ಕಬ್ಜ...
ಮನುಷ್ಯ
ತಾನು ಎಷ್ಟೇ
ಬುದ್ಧಿವಂತನೆಂದು
ಹಾರಾಡಿದರೂ
ಪಂಚಭೂತಗಳ ಮುಂದೆ
ಆತ ಮಹಾ ಕುಬ್ಜ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್