ಒಂದಿಷ್ಟು ಹನಿಗಳು

ಒಂದಿಷ್ಟು ಹನಿಗಳು

ಕವನ

ರಾಜಕಾರಿಣಿಗಳ ದರೋಡೆ 

ಅವರಿದ್ದಾಗಲೂ

ದರೋಡೆ:

ನೀವಿದ್ದಾಗಲೂ

ದರೋಡೆ

ಯಾವಕಾಲಕೂ

ಇದಕಿಲ್ಲ ತಡೆ...

 

ಎಲ್ಲರ ಕಾಲದಲ್ಲೂ

ನಡೆಯುತ್ತಿದ್ದ

ದರೋಡೆ-

ನೋಡುತ್ತಲೇ

ತಿನ್ನುತ್ತಾ ಕೆಸರೊಡೆ

ಜನ ಬಿದ್ದರು ಮಕಾಡೆ!

***

ರಿಲೀಫ್-ತಕಲೀಫ್ 

ಏನಿದು

ಮಹಾ ಮ್ಯಾಜಿಕ್?-

ಕಿಕ್ ಬ್ಯಾಕ್

ಆರೋಪ

ಸಿ ಎಂಗೆ

ಬಿಗ್ ರಿಲೀಫ್...

 

ಶ್ರೀಮಂತರಿಗೆ;

ರಾಜಕಾರಣಿಗಳಿಗೆ

ಸೆಲೆಬ್ರಿಟಿಗಳಿಗೆ-

ಸುಲಭ ರಿಲೀಫ್

ಬಡ ಬೋರೆಗೌಡನಿಗೆ

ಮಾತ್ರ ಭಾರೀ ತಕಲೀಫ್!

***

ಬೆಳಗಲಿ ಮೊಳಗಲೀ...

ನಮ್ಮ ನಮ್ಮ

ಧರ್ಮ; ಆಚಾರ 

ಸಂಪ್ರದಾಯಗಳು-

ಅಂತರ್ಗಂಗೆಯೊಲು

ಸುಪ್ತವಾಗಿ

ಬೆಳಗುತಿರಲಿ...

 

ನಮ್ಮ

ರಾಷ್ಟ್ರೀಯತೆ

ಸಂಸ್ಕೃತಿಗಳು ಮಾತ್ರ

ಬಹಿರಂಗವಾಗಿ

ಭೋರ್ಗರೆದು

ಮೊಳಗುತಿರಲಿ!

***

ಕನ್ನಡದ ಕಂಪು 

ವಿದೇಶದೋಳ್

ಹರಡುತಿರುವರ್

ನಮ್ಮ ಕನ್ನಡ

ತಾಯ್ ಮಕ್ಕಳ್-

ಸವಿಗನ್ನಡದ

ಅದ್ಭುತ ಕಂಪು...

 

ಇದು ಐತಿಹಾಸಿಕ

ಮಹಾಕನ್ನಡಂ ಅಲ್ತೇ?

ಪಂಪ; ಕುವೆಂಪು

ಆರಾಧಿಸಿ 

ಮೆರೆಸಿದರ್

ಈ ಸೊಂಪಿನ ಪೆಂಪು!

***

ಹೃದಯದ ಮಾತು 

ಎರಡು

ಹೃದಯಗಳು;

ಮನಸುಗಳು-

ಮಾತನಾಡುವ

ಸಂಭ್ರಮವೇ

ಬಲು ಚೆನ್ನ...

 

ಎರಡು

ಬಾಯಿಗಳು

ಮಾತನಾಡಿದರೆ-

ಇನ್ನಿಲ್ಲದಂತೆ

ಕೊರೆಯುವುದು

ಮನಕೆ ಕನ್ನ!

***

ನಡುಪಂತೀಯ 

ಏಡಗೈ

ಬಲಗೈಗಳ ಮಧ್ಯೆ

ನನ್ನ ದೇಹವದು

ಇದ್ದು

ಪ್ರಾಮುಖ್ಯತೆಯನು

ಪಡೆವಂತೆ....

 

ನಾನು-

ಎಡಪಂತೀಯನೂ ಅಲ್ಲ;

ಬಲಪಂತೀಯನೂ ಅಲ್ಲ

ಎರಡೂ ಕೈ ಬೀಸಿ-

ದೇಹ ಸಮತೋಲನದಲಿಟ್ಟು

ನಡೆವ ನಡುಪಂತೀಯ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್