ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಕಿತ್ತ್ಹೋಯ್ತು ಅರ್ಹತೆ! 

ಕನ್ನಡ ಮತ್ತು ಸಂಸ್ಕೃತಿ

ಇಲಾಖೆ ಸಚಿವರಿಗೆ

ಕನ್ನಡ-

ಬರೆಯೊಕೆ ಬರಲ್ಲ

ಶಿಕ್ಷಣ ಮಂತ್ರಿಗೆ;

ಓದೋಕ್ ಬರಲ್ಲ...

 

ಅಯ್ಯೋ ಹುಚ್ಚಾ-

ಅವರಿಬ್ರಿಗೂ

ಇವೆರೆಡೂ ಬಂದಿದ್ರೇ-

ಅವರಿಬ್ರೂ

ಮಂತ್ರಿಗಳೇ 

ಆಗ್ತಿರ್ಲಿಲ್ಲ!

***

ದೀಪ ಮತ್ತು ಕಗ್ಗತ್ತಲು! 

ಗೊಂದಲ

ಆತಂಕಗಳಿಂದ

ಬೇಸತ್ತ ರಾಜ್ಯ

ನಾಗರೀಕ

ಸೇವಾಕಾಂಕ್ಷಿಗಳು-

ಕೆ ಪಿ ಎಸ್ ಸಿ ಮತ್ತೆ ಫೇಲ್....

 

ಅಯ್ಯೋ

ಉರಿಯುವ

ದೀಪದಡಿಯಲಿ

ಕತ್ತಲಿರುವಂತೆ-

ಬೆಳಕ ಕೊಡಬೇಕಾದ

ಸಂಸ್ಥೆ ಕಗ್ಗತ್ತಲಿನೋಳ್!

***

ಬೆಳ್ಳಿ-ಬಂಗಾರ 

ಮಾತು

ಬೆಳ್ಳಿ-

ಒಂದೇ

ಉತ್ತರವ

ಕೊಡಲು

ಶಕ್ತ...

 

ಮೌನ

ಬಂಗಾರ-

ನೂರಾರು

ಉತ್ತರ

ಕೊಡಲು

ಮುಕ್ತ

***

ಓ ನನ್ನ  ಸರ್ಕಾರ್ ಪೊಲೀಸ್

ಎನಗೆ ಪುಕ್ಕಟೆ

ಹಣವ ನೀಡಿ-

ರಾಷ್ಟ್ರದ

ಸೋಮಾರಿ 

ಪ್ರಜೆಯನ್ನಾಗಿ

ಎಂದೂ ಮಾಡದಿರಿ....

 

ನಾನು

ಸ್ವಾಭಿಮಾನಿಯಾಗಿ

ಸೆಟೆದು ನಿಂತು-

ದುಡಿದು ತಿನ್ನುವ

ದೇಶದ ಪ್ರಗತಿಶೀಲ

ನಾಗರೀಕನನ್ನಾಗಿ ಮಾಡಿ!

***

ಬೇಕೂಫ್ 

ಸಿದ್ದರಾಮಯ್ಯ

ಯಡಿಯೂರಪ್ಪಂಗೆ

ಹೈ ರಿಲೀಫ್-

ಪಕ್ಷ

ಯಾವುದೇ ಇರಲಿ

ಅವರಿಗಿಲ್ಲ ತಕಲೀಫ್....

 

ನಮ್ಮಂಥ

ಶ್ರೀಸಾಮಾನ್ಯನಿಗೆ

ಇದು ಏಕಿಲ್ಲ?...

ಎಂದು ತಲೆಯೊಳಗೆ

ಹುಳಬಿಟ್ಟುಕೊಂಡು-

ಆದನವ ಬೇಕೂಫ್!

***

ಕೇಸರೀ ಬಾತ್ 

ದೆಹಲಿಯಲ್ಲಿ

ಆಮ್ ಆದ್ಮಿ

ಪಾರ್ಟಿಗೆ

ಸೋಲು-

ಕೇಸರಿ

ಹ್ಯಾಟ್ಸಾಫ್...

 

ಇನ್ನು ಮುಂದೆ

ದೆಹಲಿ

ಜನತೆ

ತಿನ್ನಬಹುದು

ಇಂಟರ್ನ್ಯಾಷನಲ್

ಕೇಸರೀಬಾತ್!

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್