ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಯಥಾ ದುಡಿಮೆ ತಥಾ ಫಲಮೇ...

ಈ ದೊಡ್ಡ ದೊಡ್ಡ

ಸೆಲೆಬ್ರಿಟಿಗಳೆಲ್ಲಾ-

ಮಟ್ಕಾ, ಜೂಜು

ಗುಟ್ಕಾಗಳಿಗೇ

ಜಾಹೀರಾತುಗಳ

ನೀಡುವರಲ್ಲಾ...?

 

ಈ ರೀತಿ

ತಿಂದ ಹಣ

ಜೀರ್ಣವಾಗದೆ-

ತೊಂದರೆಗಳಲೇ

ಬಳಲಿ;ಕೊರಗಿ

ನಿರ್ಗಮಿಸುವರಲ್ಲ!

***

ಮರೆಯಾದ ದೇಶಪ್ರೇಮಿ ನಟ ಮನೋಜ್...

ದೇಶಭಕ್ತಿ

ಸಿನಿಮಾಗಳನು

ಭಾರತೀಯ

ಚಿತ್ರರಂಗಕೆ

ನೀಡಿ ಮೆರೆದ-

ಮನೋಜ್ ಕುಮಾರ್...

 

ಮತ್ತೊಮ್ಮೆ ಹುಟ್ಟಿ-

ಇಂದಿನ ಯುವಕರ

ಎದೆಯೊಳಗೆ

ದೇಶಭಕ್ತಿಯ

ಕಿಚ್ಚನೆಬ್ಬಿಸು

ಓ ಭಾರತ್ ಕುಮಾರ್!

***

ತಾಯಿ ಮತ್ತು ಹೆಂಡತಿ  

ತಾಯಿಯನು

ಶೇಕಡಾ 

ತೊಂಭತ್ತರಷ್ಟು

ಅರ್ಥ ಮಾಡಿಕೊಂಡ

ತಿಮ್ಮ-

ಬಹು ಆನಂದಪಟ್ಟ...

 

ಹೆಂಡತಿಯನು

ಹತ್ತು ಪರ್ಸೆಂಟೂ

ಅರ್ಥಮಾಡಿ

ಕೊಳ್ಳಲಾರದೆ-

ಜೀವನದಲಿ

ಬಹಳ ಸಂಕಟಪಟ್ಟ!

***

ಪರಿಶ್ರಮ ಮತ್ತು ಫಲ... 

ಪಕ್ಷದ ಸ್ಥಾಪನಾ 

ದಿನಾಚರಣೆಯಲ್ಲಿ

ವಿಜಯೇಂದ್ರ ಹೇಳಿಕೆ-

ಪರಿಶ್ರಮದಿಂದ

ಬಿಜೆಪಿ

ಉದಯ...

 

ಸತ್ಯವಾದ ಮಾತು

ವಿಜಯೇಂದ್ರ-

ನೂರಕ್ಕೆ ನೂರು ಸತ್ಯಾ...

ಆದರೆ-

ಪರಿಶ್ರಮ ಪಟ್ಟವರು

ಮಾತ್ರ ನೀವಲ್ಲ!

***

ಸಂಕೀರ್ಣ ಬದುಕು! 

ಈ ಸಂಕೀರ್ಣ

ಬದುಕಿನ

ಫಲಿತಾಂಶಗಳು

ನಿನ್ನ

ಕೈಲಿಲ್ಲವೋ

ಮೂಢಾ...

 

ಪ್ರಯತ್ನವಷ್ಟೇ

ನಿನ್ನ

ಕೆಲಸ...

ಉಳಿದ ವ್ಯರ್ಥ

ಆಲಾಪಗಳೇಕೋ

ದಡ್ಡಾ!

***

ರಾಜಕೀಯ ಜಗಳ 

ಧರ್ಮಸ್ಥಳಕ್ಕೆ

ಹೋಗೋಣ;

ಆಣೆ ಮಾಡೋಣ-

ರಾಜಕೀಯ

ನಾಯಕರ ಜುಜುಬಿ

ಜುಗಲ್ಬಂದಿ ಜಗಳದ ಸೋನೆ...

 

ದೇವಸ್ಥಾನಕೆ ಹೋಗಿ

ಅಪವಿತ್ರ ಮಾಡುವ ಬದಲು-

ಜಂಗೀ ಕುಸ್ತಿಯಾದ್ರೂ

ಆಡೀ ಮತ್ತೇ

ಜನಗಳಿಗೆ ಸಿಕ್ಕೀತು

ಪುಕ್ಕಟೆ ಮನರಂಜನೆ!

***

ಮೂರ್ಖ ಸಿದ್ಧಾಂತಿಗಳು 

ಸರ್ಕಾರ-

ಜಾತಿ ಗಣತಿ ಜಾರಿಗೆ ಸೈ...

ಜಾತಿ ಜಾತಿಯೆಂದೇಕೆ

ಕುಣಿಯುತಿರುವಿರಿ

ಕೋತಿಯಂತಾಡುವ

ರಾಜಕಾರಣಿಗಳೇ...

 

ಜಾತಿಯೆಂಬುದು

ಓಟನು

ಕೀಳುವ

ಪ್ರಭಲ ಅಸ್ತ್ರವೆಂದು

ತಿಳಿದಿರುವಿರಾ

ಮೂರ್ಖ ಸಿದ್ಧಾಂತಿಗಳೇ?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್