ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಯಾವ ಪಕ್ಷ? 

ಏನ್ರಪಾ

ರಾಜಕಾರಣಿಗಳೇ-

ನಿಮ್ಮದು ಕಾಂಗ್ರೆಸ್ಸಾ...

ಇಲ್ಲಾ ಬಿಜೆಪಿನಾ

ಅಥವಾ

ಜೆ ಡಿ ಎಸ್ಸಾ... ?

 

ಇಲ್ಲಾ..ಇಲ್ಲಾ...

ನಮ್ಮದು-

'ಆಯಾರಾಂ ಗಯಾರಾಂ'

ಹೊಸ ಒಕ್ಕೂಟ;

ಅದು ‘ಜೆ ಸಿ ಬಿ’  ಪಕ್ಷಾ...

ಉಡಿಸ್...ಉಡಿಸ್ !

(J-Janata Dal, C- Congress, B - B J P )

***

ಫ್ರೀ ಬಸ್ ಪ್ರಯಾಣ 

ಹೆಣ್ಣು ಮಕ್ಕಳ

ಫ್ರೀ ಬಸ್ ಪ್ರಯಾಣ

ಕೈಗೂಡುವ

ಎಲ್ಲಾ ಲಕ್ಷಣಗಳೂ

ಕಂಡು ಬರುತಿಹುದೇ

ಲಲನೆಯರ ಸಂತೋಷ...

 

ದುರ್ಲಾಭ ಪಡೆವ

ಗಂಡು ಸಂಕುಲ

ಎಲ್ಲಿ ಹೆಣ್ಣು ವೇಶದಿ

ನಮ್ಮ ವಂಚಿಪುದೋ

ಎಂಬುದೇ 

ಸರ್ಕಾರದ ಹತಾಷ!

***

ಅಧಿಕೃತ-ಅನಧಿಕೃತ! 

ಇನ್ನು ಮುಂದೆ

ಅಧಿಕೃತವಾಗಿ

ಪತ್ನಿ 

ಮೊಬೈಲ್ನಲಿ

ಪತಿ 

ಇಣುಕುವಂತಿಲ್ಲ....

 

ಆದರೆ...

ಅನಧಿಕೃತವಾಗಿ

ಪತಿಯ

ಮೊಬೈಲನು

ಪತ್ನಿ, ಕದ್ದು

ನೋಡಬಹುದಲ್ಲ!

***

ಗ್ಯಾರಂಟಿ... 

ಉಳ್ಳವರು

ಶಿವಾಲಯವನೇ

ಬೇಕಾದರೂ

ಕಟ್ಟಿ

ಕೊಡಬಹುದು

ಹರ ಹರನೇ...

 

ಆದರೆ ಆದರೆ...

ಸರ್ಕಾರ ಕೊಟ್ಟ

'ಗ್ಯಾರಂಟಿ'ಯನು

ಬಿಟ್ಟು 

ಕೊಡುವವರುಂಟೇ

ಶಿವ ಶಿವನೇ...?

***

ಜಾಣರು...

ಮತ್ತೆ

ವಿದ್ಯುತ್ ದರ

ಹೆಚ್ಚಳ-

ಕರ್ನಾಟಕ

ಸರ್ಕಾರದ

ನಿರ್ಧಾರ..

 

ಎಮ್ಮೆಗೆ

ಹುಲ್ಲು;

ಎತ್ತಿಗೆ ಬರೆ-

ಜಾಣ

ಬ್ಯಾಲೆನ್ಸ್

ವ್ಯವಹಾರ!

 -ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್