ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಲೇಡಿ ಸಿಂಗಂ...

ಎನ್ ಕೌಂಟರ್-

ಪಾಪಿಯ

ದೇಹದ

ಪರೀಕ್ಷೆ

ಮಾಡುವರಂತೆ

ಮರಣೋತ್ತರ...

 

ವಾರೆವ್ವಾ...

ನಮ್ಮ ಕರ್ನಾಟಕದ

ಲೇಡಿ ಸಿಂಗಂ

ಕೊಟ್ಟಿಲ್ಲವೇ 

ಕ್ರೂರಿಗೆ

ಸೂಕ್ತ ಉತ್ತರ...!

***

ಡೋಂಟ್ ಟಚ್...

ಧರ್ಮ

ಮತ್ತು

ಜಾತಿಗಳು-

ಧಗಧಗಿಸುವ ಜ್ವಾಲೆಯ

ಬೆಂಕಿಗಳೋ

ಹುಚ್ಚರಾ...

 

ರಾಜಕಾರಣಿಗಳೇ-

ಇವುಗಳನು

ಮುಟ್ಟಿದರೆ

ಸುಟ್ಟು

ಭಸ್ಮವಾದೀರಿ

ಎಚ್ಚರಾ!

***

ಅಣ್ಣಾ ರಾಜಕೀಯದವರೇ...

ಅವರ ಬುರ್ಖಾ

ಇವರ ಜನಿವಾರ

ನಿಮ್ಮ ಉಡುದಾರ

ತೀರಾ ವೈಯಕ್ತಿಕ

ಧಾರ್ಮಿಕ ಪರಂಪರೆಯ

ವಿಚಾರ...

 

ಇವುಗಳನು

ನೀವು ಮುಟ್ಟಿ 

ಅಟ್ಟಹಾಸಗೈದಿರೋ-

ನೀವಾಗುವಿರಿ

ಬೆಂಕಿಗೆ ಸುಟ್ಟ 

ಭ್ರಮರ!

***

ಭಾರತೀಯರ ಹೆಮ್ಮೆ 

ಭಾರತೀಯ

ಭಗವದ್ಗೀತೆ

ಮತ್ತು

ನಾಟ್ಯಶಾಸ್ತ್ರಗಳಿಗೆ

ಯುನೆಸ್ಕೋದಿಂದ

ಮನ್ನಣೆ....

 

ಈಗಲಾದರೂ

ಅರಿಯಿರೋ-

ಭವ್ಯ ಭಾರತೀಯ

ಪರಂಪರೆಗೆ

ಹಾಕುತಿರುವರೋ

ಎಲ್ಲರೂ ಮಣೆ!

***

ಶಿಕ್ಷಕನ ಉತ್ತೇಜನ! 

ಮಧ್ಯಪ್ರದೇಶದಲಿ-

ಮದ್ಯ

ಕುಡಿಯುವಂತೆ

ವಿದ್ಯಾರ್ಥಿಗಳ

ಉತ್ತೇಜಿಸಿದ

ಶಿಕ್ಷಕ ಸಸ್ಪೆಂಡ್...

 

ತಾನೇ

ಮದ್ಯ ಕುಡಿದು

ತೂರಾಡಿದರೂ

ತೆಗೆಯುತ್ತಿದ್ದರೇನೋ

ಜನ ಕೊಂಚ-

ಮೂಳೆಗಳ ಬೆಂಡ್!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್