ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಭಾರತೀಯರು ನಾವು ಎಂದೆಂದು ಒಂದೇ.....

ಓ ರಾಜಕಾರಣಿಗಳೇ-

ಯುದ್ಧಕಾಲದಲ್ಲಿಯಾದರೂ

ನಿಮ್ಮ ಸಂಕುಚಿತತೆ ಬಿಟ್ಟು;

ದೇಶಾಭಿಮಾನವನ್ನು

ಮೆರೆದು, ನಾವೆಲ್ಲಾ ಒಂದೇ

ಎಂದು ಪುನೀತರಾಗಿ...

 

ನಿಮ್ಮ ಸೋಗಲಾಡಿ

ತನವನ್ನು ಬಿಟ್ಟು;

ನಾವೆಲ್ಲಾ ಭಾರತೀಯರು

ಎಂದು... ದೇಶಕ್ಕಾಗಿ

ಪ್ರಾಣ ತ್ಯಾಗ ಮಾಡುತಿರುವ

ಸೈನಿಕರಿಗೆ ಸ್ಫೂರ್ತಿಯಾಗಿ!

***

ದಾಂಪತ್ಯದ ಗುಟ್ಟು 

ಮಿಷೆಲ್-ಬರಾಕ್

ಒಬಾಮ-

ದಾಂಪತ್ಯ

ಗಟ್ಟಿ

ಮಾಡುವ

ಗುಟ್ಟು...

 

ಅದಕ್ಕೂ

ನೀವೇ ಪೇಟೆಂಟ್

ತೆಗೆದುಕೊಳ್ಳಬೇಡಿ;

ಎಲ್ಲರಿಗೂ ತಿಳಿಸಿ-

ತಪ್ಪಿಸಿ ಸಂಭಾವ್ಯ 

ಪೆಟ್ಟು!

***

ಓ..ದುಷ್ಟ ಮನಸೇ...

ಓ ದುಷ್ಟ ಮನಸ್ಸುಗಳ

ಒಡೆಯನೆ...

ನೀನು-

ಬೇರೆಯವರ

ಹಾಳುಮಾಡುವುದು

ನಿಜವಾದರೂ...

 

ಕೊನೆಗೆ

ಅದು-

ನಿನ್ನ ಕುತ್ತಿಗೆಗೇ

ಉರುಳಾಗುವುದರಲ್ಲಿ

ಯಾವುದೇ

ಸಂದೇಹವಿಲ್ಲಾ!

***

ಟಾಂ..ಟಾಂ...ಸುದ್ದಿ...

ಪತಿ ಖಾತೆಯಿಂದ

ಹಣ ಡ್ರಾ

ಮಾಡಲು-

ಪತ್ನಿಗೆ ಹೈಕೋರ್ಟ್

ಅನುಮತಿ

ಕೊಟ್ಟಿದೆಯಂತೆ...

 

ಸಂತೋಷ ಪಡದಿರಿ

ಮಾನಿನಿ ಪತ್ನಿಯರೇ-

ಇಲ್ಲಿದೆ ಕಂಡೀಷನ್-

ಪತಿ ನರರೋಗದಿಂದ

ಬಳಲುತ್ತಿದ್ದು ಕೋಮಾ

ದಲ್ಲೇ ಇರಬೇಕಂತೆ!

***

ಗಬ್ಬಾದ ಗ್ಯಾರಂಟಿ ಬದುಕು....

ಮುಖ್ಯಮಂತ್ರಿ

ಸಿದ್ದರಾಮಯ್ಯ-

ನಾಡಿನ

ಏಳು ಕೋಟಿ

ಜನರ ಬೆಳಕು

ಗ್ಯಾರಂಟಿ ಬದುಕು-

 

ಒಮ್ಮೆ

ಸರ್ಕಾರೀ ಬಸ್ನಲಿ

ಪ್ರಯಾಣಿಸಿ ನೋಡಿ

ಮಾನ್ಯ ಮಂತ್ರಿಗಳೇ-

ಎಷ್ಟು ಗಬ್ಬಾಗಿದೆ

ಪ್ರಯಾಣದ ಬದುಕು!

***

ಅರ್ಹ ಬಿಟ್ಟಿಭಾಗ್ಯಗಳು...

ಉಡುಗೊರೆ;

ಸಲಹೆ;

ಹಾರೈಕೆಗಳು-

ಪುಕ್ಕಟೆಗೆ

ಪಡೆದಿವೆ

ಅರ್ಹತೆಯಂತೆ...

 

ಉಳಿದಂತೆ-

ಕಷ್ಟಪಟ್ಟು

ದುಡಿವುದೇ

ದೇಶದ

ಪ್ರಗತಿಗೆ

ಮಾರ್ಗವಂತೆ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್