ಒಂದಿಷ್ಟು ಹನಿಗಳು
ಕವನ
ಮದುವೆಯಾಗಿ
ಮೊದಲ
ಯುಗಾದಿಗೆ ಹೊಲಿದಿದ್ದ
ಅಂಗಿಯೀಗ
ನನ್ನ ಮಗನಿಗೆ !
*
ಅಂದು
ನನ್ನನ್ನು ಕಂಡಾಗ
ಹೇಳುತ್ತಿದ್ದಳು ನಲ್ಲೆ
ಚಳಿ- ಚಳಿ !
ಇಂದು ಅವಳನ್ನು
ಕಂಡೊಡನೆ
ನನಗಾಗುತ್ತಿದೆ
ಚಳಿ - ಜ್ವರಾ- ರೀ!
*
ನನ್ನವಳು ನಕ್ಕಾಗ
ಹೊಳೆಯುತ್ತದೆ
ಮೂವತ್ತೆರಡು ಹಲ್ಲು
ಅತ್ತಾಗ ನೋಡಬೇಕು ?
ವಾಹ್ಹ್
ಕಾಮನ ಬಿಲ್ಲು !
*
ಭಾರತೀಯರು
ನಾವು ,
ಬೆತ್ತಲಾಗದಿದ್ದರೂ
ಬೆತ್ತಲಾಗುತ್ತಿದ್ದೇವೆ
ಹೊರ ದೇಶಗಳ
ಸಂಸ್ಕೃತಿಗೆ !
*
ಇಲ್ಲೊಬ್ಬ ಮಂತ್ರಿ
ಅಧಿಕಾರದಲ್ಲಿದ್ದಾಗ
ಲಂಚ ಮುಟ್ಟಿದ್ದೇ ಇಲ್ಲ !
ಗುಡಿಸಲಲ್ಲೇ ಇದ್ದ !
ಮಗನೋ...?
ಮಹಡಿ ಮನೆ
ಅಂತಸ್ತು
ವೈಭೋಗದಲ್ಲೇ
ಮುಳುಗೇ ಇದ್ದ !
*
ಸ್ತ್ರೀ ಹೇಗೆ ?
ಅಂದರೆ ಹೀಗೆ !
ಇಸ್ತ್ರಿ ಹಾಕಿದ
ಗರಿ ಗರಿ
ಪ್ಯಾಂಟ್ ಶರ್ಟ್ ನ
ಹಾಗೆ !
*
ಗತಿ ಇಲ್ಲದೆ
ಬಂದರೆ
ಭಿಕ್ಷುಕ
ಓಟು ಕೇಳಲು
ಬಂದರೆ
ರಾಜಕಾರಣಿ !
*
ಮಂಜಿನಾಟದ
ನಡುವೆಯೂ
ಚಿನ್ನಾಟ ಬೇಕೇ
ಮಡಿಕೇರಿಗೆ ಬನ್ನಿ!
*
ಮನುಜ
ರಸಿಕನಾಗುವ ಸಮಯ
ಶಿಲಾಯುಗಕ್ಕೆ
ಜಾರುತ್ತಾನೆ !
*
ಪ್ರಿಯೆ ಮೌನದಲ್ಲೂ
ಮೋಡ ಬಿತ್ತನೆ
ಮಾಡಬಹುದು
ಮಳೆ ತರಿಸಬಹುದು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್