ಒಂದಿಷ್ಟು ಹನಿಗಳು...
ಕವನ
ಈ ಪ್ರಪಂಚದಲ್ಲಿ” ಮೌನ “
ಜನರಿಗೆ ಎವರೆಸ್ಟ್ ಶಿಖರ ಏರಿದ
ಅನುಭವದ ಖುಷಿಯ ಕೊಟ್ಟರೆ
ಮರುಕ್ಷಣವೆ ಸಪ್ತ
ಸಾಗರದಾಳದಲ್ಲಿ ಮುಳುಗಿದಾಗಿನ
ಉಸಿರುಗಟ್ಟಿದ
ಅನುಭವಗಳನ್ನೂ ನೀಡುತ್ತದೆ !
***
ಬಾಳು ಕತ್ತಲೊಳಗೆಯಿರಲು
ಅಹಂಕಾರ ಜೊತೆಗೆ ಬರಲು
ಬೆಳಕು ಸಿಗದದು ನೋಡಿರೊ
ಅವನತಿ ಮೆಟ್ಟಿಲು ತೋರಲು
***
ಪ್ರೀತಿಯ ಹೃದಯದಾಳದಿ ಇರಲಿ ಸಂಭಾಷಣೆ
ಸವಿ ಸವಿಯೊಳು ಹಿಡಿಯಲಿ ಪ್ರೇರಣೆ
ಪ್ರೇಮ ತುಂಬಿದ ಬದುಕು ಹೀಗೆಯೇ ಸಾಗಲಿ
ಒಡಲೊಳಗಿನ ಜೀವನದಲ್ಲಿರಲಿ ಪೋಷಣೆ
***
ಮುಕ್ತಕ
ಸಾಲವದು ಶೂಲವೇ ತೀರಿಸುವ ಕೈಗಳಿರೆ
ಮೂಲವದು ದೊರಕುತಲೆ ಕೊಡುವನೈ ಮನುಜ|
ಬಾಲವಿರದಿಹ ಜನರು ದೂಷಣೆಯ ಮಾಡಿದರೆ
ಕಾಲಕಸವದುಯೆನ್ನು -- ಛಲವಾದಿಯೆ
***
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್