ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಜವಾಬ್ದಾರಿ 

ಸಿದ್ದರಾಮಯ್ಯ

ಬಹಳ ವೀಕ್

ಆಗಿದ್ದಾರೆ

ಮೊದಲಿನ ತರ

ಸಿಡಿದೇಳುತ್ತಿಲ್ಲ-

ಬಸವರಾಜ ಬೊಮ್ಮಾಯಿ...

 

ಅಧಿಕಾರ

ಜಗ್ಗಲು ಎಲ್ಲರೂ

ಹಾಗೆಯೇ-

ಅಧಿಕಾರವಿಲ್ಲದ

ವಿರೋಧ ಪಕ್ಷದವರದ್ದೇ

ಬಾಯಿ ಬೊಂಬಾಯಿ!

***

ಗೆಲುವು-ಸೋಲು 

ಹೊಟ್ಟೆಯ ಪಾಡಿಗೆ

ನಟನೆಗಿಳಿದ

ನಟರೇ

ಕಲಾದೇವಿಯ

ಆರಾಧಿಸಿ

ಗೆದ್ದವರು...

 

ಷೋಕಿಗಾಗಿ

ನಟಿಸಿದವರೇ

ಕಲಾದೇವಿಯನ್ನು

ಇನ್ನಿಲ್ಲದಂತೆ

ಶೋಷಿಸಿ

ಸೋತವರು!

***

ಕೇಳಿ..ಕೇಳಿ...ಬೆಲೆಯಿಳಿಕೆ! 

ಬಿ ಬಿ ಎಂ ಪಿ ಯಲಿ

ಶೇಕಡಾ 10-15

ಕಮಿಷನ್ ದಂಧೆ- 

ಎಚ್ಡಿಕೆ 

ಮತ್ತೊಂದು

ಬಾಂಬ್...

 

ನಲವತ್ತರಿಂದ

ಅಗಾಧ ಬೆಲೆ ಇಳಿಕೆ...

ನಿಜಕ್ಕೂ

ಸಂತೋಷದಿಂದ

ನಮ್ಮ ಮೈಯೆಲ್ಲಾ

ಜುಮ್ ಜುಮ್!

***

ಕೊಡುಗೈ ದಾನಿಗಳು 

ಪಂಚ ಗ್ಯಾರಂಟಿಗಳಿಂದ

ಸ್ವಲ್ಪ ಕೊಟ್ಟು-

ಬೆಲೆಗಳನು ಏರಿಸಿ

ಮಸ್ತು ಬಾಚಿ

ಖಜಾನೆಯನು

ತುಂಬುವರಂತೆ....

 

ನಮ್ಮ ರಾಜಕೀಯ

ನಾಯಕರು-

ಬಹು ಕುಶಲೀ

ಆಧುನಿಕ

ಕೊಡುಗೈಯ

ದಾನಿಗಳಂತೆ!

-ಕೆ ನಟರಾಜ್, ಬೆಂಗಳೂರು

ಇಂಟರ್ನೆಟ್ ತಾಣ

ಚಿತ್ರ್