ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಕವಿ ಕವಿಯದಿರು

ಕರಿಯ ಮೋಡವಾಗಿ

ಬರೆದುದೆಲ್ಲವನೂ

ಓದಬೇಕೆಂದೇನಿಲ್ಲ !

 

ಕವಿ ಬರೆದೊಡನೆ

ಕವಿತೆಯಾಗದೆಂದು

ಓದುಗರಿದ್ದರೇನೆ

ಸವಿಯಾಗುವುದೆಂದು !

 

ಜೀತ ಮುಕ್ತ ಭಾರತ

ಹೇಳಿದನು ನಾಯಕ

ಅವನ ಮನೆಯಲ್ಲೆ

ಅಂಥವರು ಇಹರು !

 

ಕಾಲ

ಬದಲಾಗದು

ಜನ

ಬದಲಾಗುತ್ತಾರೆ !

ಹೊಗಳಿದರೆ

ಮಣೆ ,

ತೆಗಳಿದರೆ ?

ಕೆರೆಮಣೆಯಂತೆ

ವರ್ತಿಸುತ್ತಿದ್ದಾರೆ 

ಛಲವಾದಿಯೆ !!

 

ಪ್ರತಿಭೆ  ಜಾರು

ಬಂಡೆಯಂತಿರದೆ

ಅರಳುತ್ತಿರುವ

ಗುಲಾಬಿ 

ಹೂವಿನಂತಿರಬೇಕು !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್