ಒಂದು ಒಳ್ಳೆಯ ನುಡಿ - ಭಾಗ 233

ಒಂದು ಒಳ್ಳೆಯ ನುಡಿ - ಭಾಗ 233

ಪಕ್ಷಿಗಳಿಂದ ನಾವು ಜೀವನದ ಪಾಠ  ಕಲಿಯೋಣ...

1. ರಾತ್ರಿ ಏನನ್ನೂ ತಿನ್ನುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ) 

2. ರಾತ್ರಿಯಲ್ಲಿ ತಿರುಗಾಡುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ) 

3. ತಮ್ಮ ಮಗುವಿಗೆ ಸರಿಯಾದ ಸಮಯದಲ್ಲಿ ಕಲಿಸುತ್ತವೆ.

4. ಗಬಗಬನೇ, ಗಟ್ಟಿಯಾಗಿರುವುದನ್ನು ತಿನ್ನುವುದಿಲ್ಲ.. ಎಷ್ಟೇ ಕಾಳು ಹಾಕಿದರೂ ಸ್ವಲ್ಪ ತಿಂದು  ಹಾರಿಹೋಗುತ್ತವೆ.

5. ರಾತ್ರಿಯಾದ ತಕ್ಷಣ ನಿದ್ರೆಗೆ ಹೋಗುತ್ತವೆ, ಬೆಳಿಗ್ಗೆ ಬೇಗ ಏಳುತ್ತವೆ ಚಿಲಿಪಿಲಿ ಹಾಡುತ್ತಾ ಏಳುತ್ತವೆ.

6. ತಮ್ಮ ಆಹಾರವನ್ನು ಎಂದಿಗೂ ಬದಲಾಯಿಸುವುದಿಲ್ಲ.

7. ತಮ್ಮ ದೈಹಿಕ ಚಟುವಟಿಕೆ ಮೂಲಕ  ನಿರಂತರವಾಗಿ ಕೆಲಸ ಮಾಡಿ. ರಾತ್ರಿ ಹೊರತುಪಡಿಸಿ ವಿಶ್ರಾಂತಿ ಇಲ್ಲ.

8. ತಮಗೆ ಕಾಯಿಲೆ ಬಂದರೆ, ಅವು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಅವು ತಿನ್ನುತ್ತವೆ.

9. ತಮ್ಮ ಮಗುವಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತವೆ.

10. ಅನೇಕ ಕಾಯಿಲೆಗಳು ದೈಹಿಕ ಕೆಲಸದಿಂದ ಬರುವುದಿಲ್ಲ.

11. ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟು ಮಾತ್ರ ತೆಗೆದುಕೊಳ್ಳುತ್ತವೆ.

12. ತಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸಿಕೊಳ್ಳುತ್ತವೆ.

13. ತಮ್ಮ ಸ್ವಂತ ಭಾಷೆಯನ್ನು ಬಿಟ್ಟು, ಇತರ ಅರ್ಥವಾಗದ ಭಾಷೆಯಲ್ಲಿ ಸಂವಹನ ಮಾಡುವುದಿಲ್ಲ.

14. ತಮ್ಮ ಮಕ್ಕಳಿಗೆ ಬದುಕುವ ಶಿಕ್ಷಣವನ್ನು ತಾವೇ ನೀಡುತ್ತವೆ. ಬೇರೆಯವರ ಬಳಿ ಟ್ಯೂಷನ್ ಕಕಳಿಸುವುದಿಲ್ಲ.

15. ತಮಗಾಗದ ಪರಿಸರದಲ್ಲಿ ಒಂದು ಕ್ಷಣವು ಇರುವುದಿಲ್ಲ.

16. ಶತ್ರುವಿನ ಮುನ್ಸೂಚನೆ ಸಿಕ್ಕ ತಕ್ಷಣ ಉಳಿದ ಪಕ್ಷಿ ಪ್ರಾಣಿ ಸಂಕುಲಗಳಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತವೆ.

17. ತಮ್ಮದಲ್ಲದ ವಸ್ತುವನ್ನು ತಿರುಗಿ ಸಹ ನೋಡುವುದಿಲ್ಲ.

18. ಪ್ರಕೃತಿ ನಿಯಮವನ್ನು ಚಾಚು ತಪ್ಪದೆ ಪಾಲಿಸಿತ್ತವೆ.

19. ಹಸಿವೆಯಾದಾಗ ಮಾತ್ರ ಆಹಾರ ಪಡೆಯುತ್ತವೆ.

20. ಕಷ್ಟಕಾಲಕ್ಕೆ ಮುಂಚಿತವಾಗಿಯೇ ಯೋಜನೆ ನಿರೂಪಿಸುತ್ತವೆ.

21. ಅವು ಬೇರೆ ಬೇರೆ ಪಕ್ಷಿಗಳ ಜೊತೆ ಜಗಳ ಆಡುವುದು ಬಹು ಕಡಿಮೆ.

"ತುಂಬಾ ಬೋಧಪ್ರದ!! ನಾವು ಸಹ ಅವುಗಳಿಂದ ಏನನ್ನಾದರೂ ಕಲಿತರೆ, ಜೀವನವು ಸರಳ, ಸುಂದರ ಮತ್ತು ಯಶಸ್ವಿಯಾಗುತ್ತದೆ!"

(ಸಂಗ್ರಹ) ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ