ಒಂದು ಒಳ್ಳೆಯ ನುಡಿ (ಭಾಗ 78) - ಭಗವದ್ಗೀತಾ ಸಾರ

೧--ಆತ್ಮವು ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಆತ್ಮ ವು ಅತೀತವಾದುದು.
೨--ಹಳೆಯ ಬಟ್ಟೆ ಕಳಚಿ ಹೊಸಬಟ್ಟೆಗಳನ್ನು ಧರಿಸುವಂತೆ ಜೀವನು ಹಳತು ಬಿಟ್ಟು ಹೊಸತಕ್ಕೆ ಪ್ರವೇಶಿಸುವನು.
೩-ಆತ್ಮವು ನಿತ್ಯ ಸತ್ಯ ಶಾಶ್ವತ.
೪--ಕರ್ಮವನ್ನು ಧರ್ಮಬದ್ಧವಾಗಿ ಮಾಡು,ಪ್ರತಿಫಲವನ್ನು ಪ್ರಕೃತಿಗೆ ಬಿಡಬೇಕು,ಅದುವೇ ನೋಡಿಕೊಳ್ಳುವುದು.
೫-ಸುಖ-ದುಃಖ,ಲಾಭ-ನಷ್ಟ, ಹೊಗಳಿಕೆ-ತೆಗಳಿಕೆ,ಜಯ-ಅಪಜಯ,ಮಾನ-ಅವಮಾನ,ಈ ಎಲ್ಲಾ ವಿಚಾರದಲ್ಲಿ ಸಮಚಿತ್ತನಾಗಿದ್ದರೆ ಬದುಕು ಸುಂದರ.
೬--ಜ್ಞಾನ ಪಡೆ,ಇಂದ್ರಿಯ ನಿಗ್ರಹಿಸು,ಮನುಜನಾಗಿ ಮಾನವತೆಯಿಂದ ಬಾಳು.
೭-- ಹೊಗೆಯಿಂದ ಬೆಂಕಿ ಏಳುವಂತೆ ಕಾಮದಿಂದ ಮೋಹ ಉಂಟಾಗಿ ಜ್ಞಾನ ಶೂನ್ಯವಾಗುತ್ತದೆ.
೮-ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣ ಇದ್ದೇ ಇದೆ,ಮತ್ತೆ ಆ ಬಗ್ಗೆ ಚಿಂತೆ ಯಾಕೆ?
೯--ನೀರಿನಲ್ಲಿರುವ ತಾವರೆ ಎಲೆನೀರನ್ನು ಹೇಗೆ ಅಂಟಿಸಿಕೊಳ್ಳುವುದಿಲ್ಲವೋ, ಹಾಗೆ ನಮ್ಮ ವ್ಯವಹಾರಗಳಿದ್ದರೆ, ಬಂಧನಗಳ ಭೀತಿ ಇಲ್ಲ, ಮೋಹ ಬರಲು ಸಾಧ್ಯವಿಲ್ಲ, ಸ್ಥಿತಪ್ರಜ್ಞನಾಗಿರಬಹುದು.
೧೦--ರೋಗಿಗಳ, ಬಡವರ ಸೇವೆಯಲ್ಲಿ, ವೃದ್ಧರಲ್ಲಿ, ಮಾತಾಪಿತರಲ್ಲಿ, ಕಷ್ಟದಲ್ಲಿದ್ದವರಲ್ಲಿ, ಕೈಲಾಗದ ಅಸಹಾಯಕರಿಗೆ ಸಹಕರಿಸು, ಅವರಲ್ಲಿ ದೇವರನ್ನು ಕಾಣು. ಧ್ಯಾನ, ತಪಸ್ಸು ಮಾಡುವ ಕರ್ಮಗಳಲ್ಲಿ ಸಹ ಇರಲಿ. ಪ್ರತಿಫಲ ಬಯಸದಿರು. ಚಟುವಟಿಕೆ ಹೀನನಾಗಿರಬೇಡ. ಭಗವಂತನ ಪೂಜೆ ಮಾಡು, ಆರಾಧಿಸು ಆದರೆ ಫಲಾಪೇಕ್ಷೆ ರಹಿತವಾದ ಪ್ರಾರ್ಥನೆ ಯಿರಲಿ.
-ಸಂಗ್ರಹ:ರತ್ನಾ ಭಟ್ ತಲಂಜೇರಿ
(ಆಕರ-ಶ್ರೀ ಕೃಷ್ಣಾಮೃತ ಸ್ತುತಿ)