ಒಂದು ಒಳ್ಳೆಯ ನುಡಿ (೩೩) - ಸ್ನೇಹಿತರು

ಒಂದು ಒಳ್ಳೆಯ ನುಡಿ (೩೩) - ಸ್ನೇಹಿತರು

೧. ಕಷ್ಟಕ್ಕೆ ಹೆಗಲು ಕೊಡುವವರು.

೨. ದುಃಖಕ್ಕೆ ನಗುವ ಬೆರೆಸುವವರು.

೩. ಸಂತಸವಿರುವಾಗ ಬಂದು ಪಾಲ್ಗೊಳ್ಳುವವರು.

೪. ಒಬ್ಬಂಟಿತನವ ನೀಗುವವರು.

೫. ಮಾರ್ಗದರ್ಶಕನಂತಿರುವವರು.

೬. ಕೆಸರಿಗೆ ಬಿದ್ದರೆ ಕೈಚಾಚಿ ಮೇಲೆ ಎತ್ತುವವರು.

೭. ಸಾಂತ್ವನ ನೀಡುವವರು.

೮. ಸಮಾಜದಲ್ಲಿ ಸ್ಥಾನಮಾನಗಳು ಬಂದಾಗ ಸಂತಸಪಡುವವರು.

೯. ಆಂತರಿಕ ವಿಷಯಗಳನ್ನು ಹಂಚಿಕೊಳುವವರು.

೧೦. ಮನಸಿನ ಭಾರವನ್ನು ಹಗುರಾಗಿಸುವವರು.

***

ನಾವು ಸಚ್ಚಾರಿತ್ರ್ಯದಿಂದ ಜಗತ್ತನ್ನೇ ಗೆಲ್ಲಬಹುದು. ಶುದ್ಧ ಚಾರಿತ್ರ್ಯವಿಲ್ಲದಿದ್ದರೆ,ಅವರು ಎಷ್ಟು ಒಳ್ಳೆಯ ವರಾದರೂ ಪ್ರಯೋಜನವಿಲ್ಲ.ಅವರಲ್ಲಿ ಬೇಕಾದಷ್ಟು ಐಶ್ವರ್ಯ ಇದೆ ಎಂದಾದರೆ ಎದುರಿನಿಂದ ಜನರು ಮಾತನಾಡಲಾರರು.ಆದರೆ ಹಿಂದಿನಿಂದ ಅವರ ಕೆಟ್ಟ ನಡತೆಯ ಬಗ್ಗೆ ಹೇಳುವರು.ಇದು ಲೋಕಾರೂಢಿ.ಹಿರಿಯರು ಯಾವಾಗಲೂ ಹೇಳುವ ಮಾತೊಂದಿದೆ*ಕೈಬಾಯಿ ಶುದ್ಧವಿಟ್ಟುಕೊಳ್ಳಬೇಕು*ಎಂಬುದಾಗಿ.ಇದರಲ್ಲಿ ಕಳ್ಳತನ ಮಾಡಬಾರದು,ಸುಳ್ಳು ಹೇಳಬಾರದು ಎಂಬ ಧ್ವನಿಯೂ ಅಡಗಿದೆ.ಆದಷ್ಟೂ ಎಲ್ಲರೂ ಒಪ್ಪುವಂತಿರಲಿ ನಮ್ಮ ಬದುಕು ಅಲ್ಲವೇ?

-ರತ್ನಾ ಕೆ ಭಟ್ ತಲಂಜೇರಿ

(ಸಂಗ್ರಹ)