ಒಂದು ಒಳ್ಳೆಯ ನುಡಿ - 104

ಒಂದು ಒಳ್ಳೆಯ ನುಡಿ - 104

‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಇದು ಒಂದು ಗಾದೆ ಮಾತು ಸಹ. ಗಾದೆ ಮಾತುಗಳನ್ನು ನಾವು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಹಿರಿಯರ ಅನುಭವದ ಅಮೃತಬಿಂದುಗಳಿವು.

ಸಜ್ಜನರ, ಒಳ್ಳೆಯವರ ಮಾತು ಕಬ್ಬಿನ ಸಿಹಿಯಂತೆ. ಅದೇ ದುರ್ಜನರ, ಕೆಟ್ಟವರ ಮಾತೆಂದರೆ ಕಹಿಬೇವಿನ ಕಷಾಯದಂತೆ. ನಮಗೆ ಕಾಲಿಗೆ ಮುಳ್ಳು ಚುಚ್ಚಿದರೆ, ಆ ಮುಳ್ಳನ್ನು ಸೂಜಿ, ಪಿನ್ನು ಇವುಗಳಿಂದಲೇ ತೆಗೆಯಬೇಕಾಗುತ್ತದೆ. ಅದೇ ರೀತಿ ದುಷ್ಟನಾದವನನ್ನು ಸರಿದಾರಿಗೆ ತರಲು ಸಾಕಷ್ಟು ಬುದ್ಧಿವಾದ ಹೇಳಬೇಕು. ಕೇಳದೆ ಇದ್ದಾಗ ದುಷ್ಟತನದಿಂದಲೇ ಆತನನ್ನು ಬಗ್ಗು ಬಡಿಯಬೇಕು. ದುಷ್ಟನ ಬುದ್ಧಿ ಕಠೋರ ವಿಷದಂತೆ. ಯಾವುದೇ ಪ್ರೀತಿ, ಮಮಕಾರ ಬೇಡ ಅವನ ಮೇಲೆ. ನಾನೇ ಎಂಬ ಅಹಂಕಾರಿ ಆತ. ಅವನ ದಾರಿಗೆ ಇಳಿದು ಬುದ್ಧಿ ಕಲಿಸಬೇಕು. ಮಿತ್ರರಿಗೆ ಮಿತ್ರರಾಗೋಣ, ಶತ್ರುಗಳಿಗೆ ಶತ್ರುವಾಗೋಣ. ಇದೇ ಈ ಗಾದೆ ಮಾತಿನ ಒಳತಿರುಳು.

- ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ