ಒಂದು ಒಳ್ಳೆಯ ನುಡಿ - 111
‘ನಮ್ಮಲ್ಲಿ ಸಾಮರ್ಥ್ಯವಿದೆ’ ಎಂದು ಸುಮ್ಮನೆ ಕುಳಿತರೆ ಏನೂ ಸಿಗದು. ಇರುವ ಸಾಮರ್ಥ್ಯವನ್ನು ಸರಿಯಾದ ವಯಸ್ಸಿನಲ್ಲಿ, ಸರಿಯಾದ ದಾರಿಯಲ್ಲಿ, ಸಮರ್ಪಕವಾಗಿ ಯೋಚಿಸಿ, ಯೋಜನೆಗಳನ್ನು ರೂಪಿಸಿ ಬಳಸಿಕೊಂಡರೆ ಯಶಸ್ವೀ ಬದುಕು ನಮ್ಮದಾಗುವುದು. ಅವಕಾಶಗಳನ್ನು ನಾವು ಅರಸುತ್ತಿರಬೇಕು. ನಮ್ಮ ಬಳಿಗೆ ಬರಲೆಂದು ಕಾಯುತ್ತಾ ಕೂರುವುದು ಮೂರ್ಖತನ. ಬಂದ ಅವಕಾಶವನ್ನು ಬಳಸುವ ಜಾಣ್ಮೆ ಇರಬೇಕು. ಸಾಮರ್ಥ್ಯ, ಜಾಣ್ಮೆ, ವಿವೇಚನೆ ಮೂರೂ ಬೆರೆತಾಗ ನಾವು ಕೈಗೊಂಡ ಕಾರ್ಯದಲ್ಲಿ ಜಯ ಸಿಗಬಹುದು.
ಯಾವುದೇ ಕೆಲಸವನ್ನು 'ನಾನು ಒಬ್ಬನೇ ಮಾಡಬಲ್ಲೆ' ಎಂಬುದಕ್ಕಿಂತ ನಾವೆಲ್ಲರೂ ಸೇರಿ ಮಾಡೋಣ ಅಂದರೆ ಯೋಚಿಸಿದ ಕಾರ್ಯ ವನ್ನು ಬಹಳ ಬೇಗ ಮುಗಿಸಬಹುದು. ಆಗ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗಬಹುದು. ಮುಖ್ಯವಾಗಿ ನಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ನಮಗೆ ನಂಬಿಕೆ, ವಿಶ್ವಾಸವಿರಬೇಕು.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ