ಒಂದು ಒಳ್ಳೆಯ ನುಡಿ - 121

ಒಂದು ಒಳ್ಳೆಯ ನುಡಿ - 121

ಕಣ್ಣಿಗೆ ಕಾಣಿಸದ ನಿರಾಕಾರ ಮಹಾಶಕ್ತಿ ಆ ಭಗವಂತನಿಗೆ, ನಮಗೆ ವಿದ್ಯೆ ಕಲಿಸಿದ ಗುರುವಿಗೆ, ಹೊತ್ತು ಹೆತ್ತು ತುತ್ತ ನೀಡಿ ಸಲಹಿದ ತಾಯಿಗೆ, ಯಾವುದೇ ಬೇನೆ ಬೇಸರಿಕೆ ತೋರ್ಪಡಿಸದೆ ಮೌನಿಯಾಗಿ ನಮ್ಮನ್ನು ಪೊರೆದು ಬದುಕಿನ ತಿರುಳನ್ನು ಬೋಧಿಸಿದ ಮೇರುಪರ್ವತ ತಂದೆಗೆ, ಹೊತ್ತ ಭೂಮಿ ತಾಯಿಗೆ, ಸದಾ ಉಪಕಾರ ಮಾಡುವ ಹಸಿರು ಗಿಡಮರಗಳಿಗೆ ಕಷ್ಟಕಾಲದಲ್ಲಿ ನಾನಿದ್ದೇನೆ ಎಂದು ಧೈರ್ಯದ ಜೊತೆಗೆ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿ ಹುಲ್ಲುಕಡ್ಡಿಯಷ್ಟಾದರೂ ಸಹಾಯ ಮಾಡುವವರಿಗೆ ಜೀವಕ್ಕೆ ಜೀವ ಕೊಡುವ ಸ್ನೇಹಿತರಿಗೆ ನಾವು ಯಾವಾಗಲೂ ಋಣಿಯಾಗಿರಬೇಕು. ಕಡುಕಷ್ಟ ಬಂದಾಗ ಆಸರೆಯಾಗಿ ನಿಲ್ಲುವವರ ಮೇಲೆ ಪ್ರೀತಿ, ಕೃತಜ್ಞತೆ ಇರಬೇಕು. ಮನುಷ್ಯ ಧರ್ಮವನ್ನು, ಮಾನವೀಯತೆಯನ್ನು ಸದಾ ಕಾಪಾಡಿಗೊಂಡು ಬದುಕು ಸಾಗುಸುವವನೇ ನಿಜವಾದ ಶ್ರೀಮಂತ. ಆಸ್ತಿ,ಮಹಡಿ ಮೇಲೆ ಮಹಡಿ ಕಟ್ಟಿ ವಾಸಿಸುವವರೇ ಶ್ರೀಮಂತರೆಂಬ ತೀರ್ಮಾನ ಬೇಡ. ಬಾಹ್ಯಕ್ಕೂ ಅಂತರ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೈಜತೆಯಲ್ಲಿ ಸತ್ಯಾಂಶಗಳನ್ನು ಶೋಧಿಸಿದಾಗ ಮಾತ್ರ ಗೋಚರವಾಗಬಹುದು. ನಮ್ಮ ಒಳಗಣ್ಣು ತೆರೆದು ನೋಡುವ ಪ್ರಯತ್ನ ಮಾಡಿದಾಗ ಇದೆಲ್ಲ ಗೋಚರವಾಗಬಹುದು. ಉಪಕರಿಸಿದ ಬಂಧುಗಳನ್ನು ಯಾವತ್ತೂ ಮರೆತು ಕೃತಘ್ನರಾಗಬಾರದು. ಕೃತಜ್ಞತೆಯಿರಲಿ.

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ