ಒಂದು ಒಳ್ಳೆಯ ನುಡಿ - 133

ಒಂದು ಒಳ್ಳೆಯ ನುಡಿ - 133

ಜೀವನದ ಹಾದಿ ಬಹಳ  ದೂರವಿದೆ. ನಮ್ಮ ಹಣೆಯಲ್ಲಿ ಏನು ಬರೆದಿದೋ ನಮಗೆ ಗೊತ್ತಿಲ್ಲ. ಬಂದ ಹಾಗೆ ಬಂದದ್ದನ್ನು ಸ್ವೀಕರಿಸಿಯೋ ಅನುಭವಿಸಿಯೋ ಮುಂದೆ ಮುಂದೆ ಸಾಗುತ್ತೇವೆ. ಸಾಗುವ ದಾರಿಯಲ್ಲಿ ಕೆಲವರ ನಿಲ್ದಾಣಗಳು ಬೇಗ ಬರುತ್ತದೆ, ಅಲ್ಲಿ ಇಳಿಯಲೇ ಬೇಕು, ಮುಂದೆ ಹೋಗಲಾಗದು. ಮತ್ತೆ ಉಳಿದವರು ಮುಂದೆ ಸಾಗುತ್ತಲೇ ಇರುತ್ತಾರೆ. ಕಲ್ಲು ಮುಳ್ಳು, ನೋವು ನಲಿವು ಎಲ್ಲವೂ ದಾರಿಯಲ್ಲಿ ಇರಬಹುದು. ಒಂದಷ್ಟು ಜನ ಬೆನ್ನನ್ನೇ ಹಿಡಿದು ಮುಂದೆ ಹೋಗದಿರು ಬಾ ಎಂದು ಜಗ್ಗಬಹುದು. ಚಾಡಿಯ ಮಾತುಗಳನ್ನಾಡಿ ಕಿವಿ ಹಿಂಡಬಹುದು. ಆದರೆ ನಾವು ನಮ್ಮ ವಿವೇಚನೆಯನ್ನು ಉಪಯೋಗಿಸಿ, ಎಲ್ಲವನ್ನೂ ನಿಭಾಯಿಸಿಕೊಂಡು ಮುಂದೆ ಸಾಗಬೇಕು. ಅದನ್ನೇ ಬದುಕಿನ ಹಾದಿ ಎನ್ನುತ್ತೇವೆ. ಸಾಗುವಾಗ ಸಣ್ಣಪುಟ್ಟ ದೋಷಗಳಾಗಬಹುದು. ಅದನ್ನು ಸ್ವೀಕರಿಸಿ ಸರಿಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ತಪ್ಪುಗಳನ್ನು ಹೇಳಿದಾಗ ತಿದ್ದಿಕೊಳ್ಳುವವನೇ ಬುದ್ಧಿವಂತ ಎನಿಸುವನು. ತಪ್ಪುಗಳಾಗುವುದು ಸಹಜ. ತಿದ್ದಿ ನಡೆಯುವುದು ಮನುಷ್ಯತ್ವವೆನಿಸಿಕೊಳ್ಳುತ್ತದೆ. ಏನೇ ಬರಲಿ ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಮುಂದೆ ಸಾಗೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ