ಒಂದು ಒಳ್ಳೆಯ ನುಡಿ (148) - ಕಾರ್ಮಿಕ ದಿನ

ಒಂದು ಒಳ್ಳೆಯ ನುಡಿ (148) - ಕಾರ್ಮಿಕ ದಿನ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು ದುಡಿಯುವ ಒಂದು ವರ್ಗ. ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕೆಂದು  ಈ ವಿಶೇಷ ದಿನ ಹುಟ್ಟಿಕೊಂಡಿತು.

ಮೊದಲು ಪ್ಯಾರಿಸ್ ದೇಶದಲ್ಲಿ ಮೇ 1ರಂದು ಸ್ಥಾಪಿಸಲ್ಪಟ್ಟಿತು. ಭಾರತದಲ್ಲಿ 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ರಸ್ತಾವನೆಯಾಗಿ ‘ಮೇ 1 ಕಾರ್ಮಿಕ ದಿನ’ ಎಂದು 1927ರಲ್ಲಿ ಆರಂಭವಾಯಿತು. ಸಮಾಜವಾದಿ ಸಂಘಟನೆಗಳು, ಕಾರ್ಮಿಕ ಸಂಘಗಳು, ಬುದ್ಧಿಜೀವಿಗಳು ಸೇರಿ ಮೊದಲು ಇದನ್ನು ಸ್ಥಾಪಿಸಿದರು. 2ನೇ ಮಹಾಯುದ್ಧದ ನಂತರ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಕಾರ್ಮಿಕರ ಕಲ್ಯಾಣ, ಕೆಲಸಕ್ಕೆ ತಕ್ಕ ಕೂಲಿ, ಸಂಭಾವನೆ, ರೋಗರುಜಿನಗಳ ಸಮಯದಲ್ಲಿ ಧನಸಹಾಯ, ಕೆಲಸ ಮಾಡುವಲ್ಲಿ ಉತ್ತಮ ಪರಿಸರ ನಿರ್ಮಾಣ, ಶಿಕ್ಷಣ, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು, ಮಹಿಳಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಗಳು, ವಿಮಾ ಯೋಜನೆ, ಕಾನೂನು ಸಲಹೆ ಮತ್ತು ಹೋರಾಟ, ಕೈಗಾರಿಕೆ, ಕನಿಷ್ಠ ಕೂಲಿ ನಿಗದಿ, ಈ ಮುಂತಾದ ವಿಷಯಗಳನ್ನು ಚರ್ಚೆ ಮಾಡಿ ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೆ ತಂದು ಅನುಷ್ಠಾನ ಗೊಳಿಸುವ ಮಹಾ ಹೊಣೆಗಾರಿಕೆ ಈ ಕಾರ್ಮಿಕ ಸಂಘಟನೆಗಳದ್ದಾಗಿದೆ.

ಮುಖ್ಯವಾಗಿ ಸಾಮಾಜಿಕ ಭದ್ರತೆ ಒದಗಿಸುವುದು. ಮೇ 1ರಂದು ಸಭೆ, ಚರ್ಚೆ, ನಿರ್ಣಯ, ಮೆರವಣಿಗೆ, ಪ್ರದರ್ಶನ ಗಳು,ಸಮಾರಂಭಗಳು,ಪರಿಹಾರ ವಿತರಣೆ ಮುಂತಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಇದರಲ್ಲಿ ಆಲೋಚನೆ ಮಾಡುವ ಅಂಶವೆಂದರೆ, ಸಂಘಟಿತ, ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರೂ ಇದ್ದಾರೆ. ಫ್ಯಾಕ್ಟರಿ, ಬೀಡಿ, ಸಾಬೂನು, ಎಣ್ಣೆ, ಗೃಹನಿರ್ಮಾಣ, ತೋಟಗಾರಿಕೆ ಮುಂತಾದ ಹತ್ತು ಹಲವು ಸೇರುತ್ತದೆ. ಆಯಾಯ ವಿಭಾಗದಲ್ಲಿ ಸಂಬಂಧ ಪಟ್ಟವರು ಅವರ ಸದಸ್ಯತ್ವ ಮಾಡಿ, ಅವರಿಗಿರುವ ಸೌಲಭ್ಯಗಳನ್ನು ಹೇಳಿ ಕೊಡಿಸುತ್ತಾರೆ. ಎಲ್ಲಾ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಎಲ್ಲವನ್ನೂ ಜಾರಿಗೆ ತಂದು, ಸರ್ವರು, ಆದಷ್ಟೂ ಉತ್ತಮ ಜೀವನ  ನಡೆಸುವಂತಾಗಲಿ ಎಂಬ ಹಾರೈಕೆ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ