ಒಂದು ಒಳ್ಳೆಯ ನುಡಿ (163) - ದೊಡ್ಡವರ ಜಾಣ ನುಡಿಗಳು
* ಸ್ವರ್ಗ-ನರಕ ಎಲ್ಲ ಇಲ್ಲಿಯೇ ಇದೆ.
* ಅಧ್ಯಯನ ಜ್ಞಾನಕ್ಕೆ ರಹದಾರಿ.
* ಅಧಿಕಾರ ದಾಹ ಎಂಬುದು ಭಯಂಕರವಾದ ಸಾಂಕ್ರಾಮಿಕ ರೋಗವಿದ್ದಂತೆ, ಯಾರ ಮನಸ್ಸಿಗೆ ಈ ಭೂತ ಹೊಕ್ಕಿತೋ ಅವರ ಸರ್ವನಾಶ ಖಚಿತ.
* ಸ್ವರ್ಗ-ನರಕ ಬೇರೆಲ್ಲೂ ಇಲ್ಲ, ನಾವಾಡುವ ಮಾತು, ವರ್ತನೆ, ವ್ಯವಹಾರ, ದಿನ ನಿತ್ಯದ ಬದುಕಿನಲ್ಲಿ, ಉತ್ತಮ ಮೌಲ್ಯಗಳಲ್ಲಿ ಅಡಗಿದೆ.
* ಹಿಂದೊಂದು ಮುಂದೊಂದು ಆಡದಿರಿ, ಕೋಪಿಸಿದರೂ ಬೇಸರಿಸದಿರಿ, ನೇರವಾಗಿ ಇರುವ ವಿಷಯವನ್ನು ತಿಳಿಸಿ.
* ಜ್ಞಾನ ಎಂಬುದು ಸೂರ್ಯನಂತೆ, ಮಾಯೆ ಅಂಧಕಾರ ಮುತ್ತಿದಂತೆ, ಸೂರ್ಯ ಬೆಳಗಿದಾಗ ಕತ್ತಲೆ ಬಾರದು, ಜ್ಞಾನವಿದ್ದಲ್ಲಿಗೆ ಮಾಯೆಯೆಂಬ ಅಂಧಕಾರ ಬಾರದು, ಅರ್ಥವಿಸಿಕೊಳ್ಳಿ.
* ಮಾನವೀಯತೆ ಮರೆತು ದಾನವನಾಗಬಾರದು. ಮನುಷ್ಯ ಮನುಷ್ಯನಾಗಿಯೇ ಜೀವನ ನಡೆಸಬೇಕು.
* ಮೊದಲು ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕು, ಹಾಗಾದಾಗ ಜಗತ್ತೇ ನಮ್ಮನ್ನು ನಂಬಬಹುದು. ಅಪನಂಬಿಕೆಯೆಂಬುದು ವಿಷದ ಮುಳ್ಳು. ಅದು ಒಮ್ಮೆ ಚುಚ್ಚಿದರೆ ಗುಣಪಡಿಸಲಾರದ ಕಾಯಿಲೆಯಂತೆ ಕಾಡುತ್ತಿರುತ್ತದೆ.
* ಪಾಪ ಕಾರ್ಯದಲ್ಲಿ ಸಂಪಾದಿಸಿ ದಾನಮಾಡಿದರೆ ಅದು ಕೇವಲ ಪ್ರಾಯಶ್ಚಿತ್ತಕ್ಕೆ ಮಾತ್ರ. ಸತ್ ಪಾತ್ರ ದಾನ ಎನಿಸದು. ಶ್ವಾನದ ಹಾಲು ಶ್ವಾನದ ಮರಿಗಳಿಗೆ ಮಾತ್ರವಲ್ಲವೇ? ಇತರರಿಗೆ ಆಗದು. ಪಂಚಾಮೃತಕ್ಕೆ ಬಳಸಲಾಗದು. ಅದೇ ರೀತಿ ಪಾಪಿಗಳ ಗಳಿಕೆ ಮಾಡಿದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ.
* ಚಿನ್ನ-ಬೆಳ್ಳಿಯಂತೆ ಗುಣವೆಂಬುದು ಅಮೂಲ್ಯವಾದದ್ದು. ನಾವು ಮಾತ್ರ ಚಿನ್ನ-ಬೆಳ್ಳಿ ಜೋಪಾನ ಮಾಡಿದಂತೆ ಗುಣವನ್ನು ಜೋಪಾನ ಮಾಡುವುದಿಲ್ಲ. ಇದೇ ನಮ್ಮ ದುರ್ಬಲತೆ.
(ಆಧಾರ: ಹಿತೋಕ್ತಿ ಸೂಕ್ತಿಗಳ ಸಂಗ್ರಹ)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ