ಒಂದು ಒಳ್ಳೆಯ ನುಡಿ - 166
* ತನಗೆ ತಾನೇ ಕಡಿವಾಣ ಹಾಕಿಕೊಳ್ಳುವವ, ಮೂಗುದಾರ ಇರಲೆಂಬವ, ತನ್ನ ಇತಿ-ಮಿತಿಯರಿತು ವ್ಯವಹರಿಸುವವನೇ ಈ ಪ್ರಪಂಚದಲ್ಲಿ ಸ್ವತಂತ್ರ ವ್ಯಕ್ತಿ. ಅವನಿಗೆ ಇತರರ ಉಪದೇಶವಾಗಲಿ, ಮಾತಾಗಲಿ ಬೇಕಿಲ್ಲ.
* ಅದೃಷ್ಟ ನಮ್ಮ ಕಡೆಗಿದ್ದರೆ ನಾವು ಮುಟ್ಟಿದ್ದೆಲ್ಲ ಚಿನ್ನವಾಗಬಹುದಂತೆ. ಅದೇ ಅದೃಷ್ಟ ತಿರುಗಿ ನಿಂತರೆ ಬದುಕಿನ ಹಾದಿಯಲಿ ಸೋಲುಗಳ ಸರಮಾಲೆ ಒಂದರ ಹಿಂದೆ ಒಂದು ಬಂದು ಕಾಡಿಸುವುದಂತೆ. ದೈವದೇವರ ಕೃಪೆಯಿದ್ದರೆ ನಮ್ಮ ಕರ್ತವ್ಯ ಪ್ರಾಮಾಣಿಕವಾಗಿದ್ದರೆ ಸೋಲೆಂಬ ಮಾತು ಹತ್ತಿರಬಾರದು.
* ಕೀರ್ತಿ, ಅಭಿಮಾನಗಳು ಎಂದೂ ಶಾಶ್ವತವಲ್ಲ. ತನ್ನನ್ನು ನಂಬಿ ತನ್ನೊಂದಿಗಿರುವ ಅಥವಾ ಬೆನ್ನ ಹಿಂದಿರುವ, ತನಗಾಗಿ ತ್ಯಾಗ ಮಾಡಿದವರ ಉಪೇಕ್ಷೆ ಸಲ್ಲದು. ತಾನು ಹೇಗಿರಬೇಕು? ಹೇಗಿದ್ದರೆ ಚಂದ ಎಂಬುದನ್ನು ತನ್ನ ಅಂತರಂಗಕ್ಕೆ ತನಗೆ ತಾನೇ ಪ್ರಶ್ನೆ ಹಾಕಿಕೊಂಡು ಅವಲೋಕನಕ್ಕೊಳಪಡಿಸುವುದು ಮನುಷ್ಯಧರ್ಮ ಅದುವೇ ಶಾಶ್ವತ ಸಹ.
* ಆಷಾಢ ಕಳೆದು ಶ್ರಾವಣದ ಸೂರ್ಯ ಕಿರಣಗಳ ಪ್ರಭೆ ಮೆಲ್ಲಮೆಲ್ಲನೆ ಬುವಿಯನ್ನು ಬೆಳಗುವಂತೆ ಜಗದ ಜೀವರ ಬಾಳಿನಲ್ಲಿ ಕಳೆ-ಕೊಳೆ-ಮೌಢ್ಯಗಳು ಕೊಚ್ಚಿಹೋಗಿ ಹೊಸಬೆಳಕು ಮೂಡಿಬರಲಿ. ಎಲ್ಲರಿಗೂ ಶುಭವಾಗಲಿ.
-ರತ್ನಾ ಕೆ. ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ