ಒಂದು ಒಳ್ಳೆಯ ನುಡಿ (179) - ಬಾಪೂರವರ ಹೊನ್ನುಡಿಗಳು

ಒಂದು ಒಳ್ಳೆಯ ನುಡಿ (179) - ಬಾಪೂರವರ ಹೊನ್ನುಡಿಗಳು

ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಸಮಾಜ ಸುಧಾರಕ, ಸಂಘಟಕ, ಉತ್ತಮ ಬರಹಗಾರರಾದ, ದೇಶದ ಹಿತಕ್ಕೋಸ್ಕರ ಬಲಿದಾನವಾದ ಮಹಾತ್ಮರ ಜನುಮ ದಿನವಿಂದು.

೧. ಯುವಶಕ್ತಿಗಳೇ ನೀವೆಲ್ಲರೂ ಸಮಾಜದ ಅಮೂಲ್ಯ ಆಸ್ತಿಗಳು.ಹೊಣೆಗಾರಿಕೆಯರಿತು ವರ್ತಿಸಿ. ದೇಶದ ಹಿತ ಕಾಪಾಡಿ.

೨. ದೀನರ, ಬಡವರ, ಕೈಲಾಗದವರ ಬಗ್ಗೆ ಕನಿಕರ ತೋರಿಸಿ, ಬದುಕಿನ ದಾರಿಗಾಗಿ ಸಹಕರಿಸಿ.

೩. ಅಕ್ಷರ ಕಲಿಕೆ, ಕಾಲೇಜು ವಿದ್ಯಾಭ್ಯಾಸ ಮಾಡಿ, ಜೊತೆಗೆ ಆತ್ಮಸ್ಥ್ಯೆರ್ಯ ಬೆಳೆಸಿಕೊಳ್ಳಿ.

೪. ಸಾಧನೆಗೆ ಮೂಲ ಮನಸ್ಸು, ಹಠ, ನಿರ್ಭಯವಿರಬೇಕು.

೫. ಹಳ್ಳ -ತಿಟ್ಟು, ಒರಟು ನೆಲ, ಕಲ್ಲು-ಮುಳ್ಳುಗಳೆಂಬ ಜೀವನ ವಿಶ್ವವಿದ್ಯಾನಿಲಯವನ್ನು ಹಾದುಹೋಗಲು ಪ್ರಯತ್ನಿಸಿ, ಡಿಗ್ರಿ ಪಡೆಯಿರಿ.

೬. ಸುಳ್ಳನ್ನು ಆಡದಿರಿ, ಸತ್ಯವನ್ನೇ ನುಡಿಯಿರಿ, ಅದು ದಾರಿದೀಪ.

೭. ಸಂಸ್ಕೃತಿ ಬದುಕಿನ ಅಡಿಪಾಯ--ನೆನಪಿರಲಿ.

೮. ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ, ಬದುಕಿನ ದಾರಿಯೊಂದಿಗೆ ಶೀಲ ಸಂವರ್ಧನೆ.

೯. ಈ ಜನ್ಮ ದೇವನಿತ್ತ ಕೊಡುಗೆ, ಉತ್ತಮತೆಯಲ್ಲಿ ಜೀವಿಸೋಣ. ಕಾಯಕ, ಸ್ವಾವಲಂಬನೆಯಲ್ಲಿ ನಿಷ್ಠೆ, ಇನ್ನೊಬ್ಬರ ಸಂಪತ್ತಿಗೆ ಕನ್ನ ಹಾಕದಿರುವುದು, ಸ್ವಾರ್ಥ, ದರ್ಪ ತೋರದಿರುವುದು, ನಂಬಿಕೆ,ವಿಶ್ವಾಸವಿಡುವುದು, ಸತ್ಕಾರ್ಯದಲ್ಲಿ ತೊಡಗುವುದು ಜೀವನದ, ಬದುಕಿನ ಗುರಿಯಾಗಿರಲಿ.

೧೦. ವ್ಯಕ್ತಿತ್ವವಿಲ್ಲದವ ಶವದಂತೆ. ಇದ್ದರೂ ಪ್ರಯೋಜನವಿಲ್ಲದವ. ಬಡವರ ಹೊಟ್ಟೆಗೆ ಹೊಡೆಯುವವ ಕಡುಪಾಪಿ. ತ್ಯಾಗ ಆನಂದದಾಯಕ, ಚೇತೋಹಾರಿ. ಪ್ರಾರ್ಥನೆ ನೆಮ್ಮದಿಗೆ ಮೂಲ. ಇತರರಿಗೆ ಕೇಡು ಬಗೆಯದಿರಿ. ಜೀವನವೇ ಒಂದು ಬೃಹತ್ ಧರ್ಮ ಎಂದು ಭಾವಿಸಿರಿ.

(ಸಂಗ್ರಹ) - ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ