ಒಂದು ಒಳ್ಳೆಯ ನುಡಿ - 191

*ಕವಿತೆ ಬರೆದೆವೆಲ್ಲ ತಾಯೆ*
*ಸವಿ ಮಾತಿನಲಿ ನೀನು ಕಾಯೆ*
*ನಿನ್ನ ನುಡಿಯೇ ಚೇತನ*
*ನನ್ನ ನಡೆಯೆ ಅರ್ಪಣ*
ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಭಾಷಾ ಬೇರುಗಳಲ್ಲಿ ಗಟ್ಟಿತನವಿದೆ, ಬಿಳಲುಗಳಲ್ಲಿ ಆಸಕ್ತಿಯಿರಲಿ, ಆದರೆ ಬೇರಿನ ಮೂಲವನ್ನು ಮರೆಯದಿರೋಣ.
***
*ಕನ್ನಡ ಎನ್ನುವ ಮೂರಕ್ಷರದಿ*
*ಎನಿತೋ ಅರ್ಥವಿದೆ*
*ಕನ್ನಡತನವ ಮೈಗೂಡಿಸಿದರೆ*
*ಬಾಳಿಗೆ ಸತ್ವವಿದೆ*
ಕನ್ನಡ ಎನುವ ಪದವೇ ನರನಾಡಿಗಳ ಬಡಿದೆಬ್ಬಿಸುವುದು.ನಾವು, ನಮ್ಮದು, ನಮ್ಮವರು ಅಲ್ಲವೇ? ಎಲ್ಲರನ್ನೂ, ಎಲ್ಲವನ್ನೂ ಒಪ್ಪಿ ಹೊಂದಾಣಿಕೆಯ ಬದುಕು ನಡೆಸುವವರು ಕನ್ನಡಮ್ಮನ ಮಕ್ಕಳು.ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಕನ್ನಡವನ್ನೇ ಮೈಗೂಡಿಸಿಕೊಳ್ಳಲು ಕಲಿಯೋಣ-ಕಲಿಸೋಣ ಬಂಧುಗಳೇ.
***
*ಕನ್ನಡ ನೆಲದಲಿ ಹುಟ್ಟಿದೆಯೆಂದರೆ ಹಿಂದಿನ ಪುಣ್ಯಫಲ*.
*ಗಿಡಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ.*
*ಖಂಡಿತಾ ಹೌದಲ್ಲವೇ? ಕನ್ನಡ ನೆಲದಲಿ ಉಸಿರು, ಹಸಿರು, ಮಿಡುಕುವ ಜೀವ ಎಲ್ಲವೂ ಕನ್ನಡವೇ. ಹುಟ್ಟಿದ ಮಣ್ಣು, ಹೊತ್ತು ಹೆತ್ತ ತಾಯಿಯನ್ನು ಮರೆಯುವುದಾದರೂ ಹೇಗೆ? ಈ ಜನ್ಮವಿಡೀ ದುಡಿದರೂ ಅವರ ಋಣ ತೀರಿಸಲಾಗದು.
-ರತ್ನಾ ಕೆ. ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ