ಒಂದು ಒಳ್ಳೆಯ ನುಡಿ - 21
ಈಶಾವಾಸ್ಯಂಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್/
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್//
ಪರಿವರ್ತನ ಶೀಲವಾದ ಎಲ್ಲ ವೂ ಆ ಈಶನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ನಮಗೇನು ದಕ್ಕಿದೆಯೋ ಅದನ್ನೇ ಅನುಭವಿಸೋಣ. ಮೋಹರಹಿತ ಜೀವನ ಸುಖಕ್ಕೆ ರಹದಾರಿ. ತ್ಯಾಗದ ಬದುಕು ಸ್ವಲ್ಪ ಮಟ್ಟಿಗಾದರೂ ಇರಲಿ. ಬೇರೆಯವರ ಸಂಪತ್ತು ತೃಣಕ್ಕೆ ಸಮ. ನಮಗೆ ಬೇಡ. ಎಲ್ಲ ವೂ ಶಿವನಿಗೆ ಅರ್ಪಿತ ಎಂಬ ಮನೋಭಾವ ನಮ್ಮದಾಗಲಿ.
*ಯಾವುದೇ ಒಂದು ಕೆಲಸ ವನ್ನು ಮಾಡಲೇ ಬೇಕೆಂಬ ತೀರ್ಮಾನ ಕ್ಕೆ ಬಂದಾಗ ಸಾಲುಸಾಲು ಅಡಚಣೆಗಳು ಬೆಂಬಿಡದೆ ಬರುತ್ತವೆ.ಅವಕಾಶಗಳನ್ನು ಅರಸುತ್ತಾ ಹೋಗೋಣ, ಅಡಚಣೆಗಳನ್ನು ಮೆಟ್ಟಿ ನಿಂತು ಸಾಧಿಸುವ ಗುಣವನ್ನು ಬೆಳೆಸಿಕೊಳ್ಳೋಣ. ಆಗ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ.
*ನಮ್ಮ ಬದುಕಲ್ಲಿ ಹಲವಾರು ಜನ ಬಂದು ಹೋಗುವರು. ಬಂದವರೆಲ್ಲ ನಮ್ಮ ಹಿತೈಷಿಗಳೆಂದು ನಂಬಲಾಗದು. ಯಾರನ್ನು ಸಹ ನಂಬುವ, ವಿಶ್ವಾಸವಿಡುವ ಮೊದಲು ಹತ್ತು ಭಾರಿ ಯೋಚಿಸಿ ಮುಂದೆ ಹೆಜ್ಜೆ ಇಡೋಣ. ಯಾಕೆಂದರೆ ನಮ್ಮ ಬಾಯಿಯಲ್ಲಿರುವ, ನಮ್ಮದೇ ಹಲ್ಲುಗಳು, ನಮ್ಮದೇ ಸ್ವಂತ ನಾಲಿಗೆಯನ್ನು ಸಹ ಒಮ್ಮೊಮ್ಮೆ ಕಚ್ಚಿಬಿಡುತ್ತವೆ.
-ರತ್ನಾ ಭಟ್ ತಲಂಜೇರಿ (ಸಂಗ್ರಹ)
ಪೆನ್ಸಿಲ್ ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು