ಒಂದು ಒಳ್ಳೆಯ ನುಡಿ (213) - ತಾಯಿ

ಇವತ್ತು ಕೆಲಸದ ನಡುವೆ ಪ್ರಜ್ವಲ್, ತಾಯಿಯನ್ನು ಕೊಂದ ಮಗಳ ನ್ಯೂಸ್ ಹೇಳಿದ. ಒಂದು ಕ್ಷಣ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯಲಿಲ್ಲ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಪ್ರೀತಿ ಯಾವುದು ಅಂದರೆ ಅದು ತಾಯಿ ಪ್ರೀತಿ. ಜಗತ್ತಿನಲ್ಲಿ ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ.
ನೋವಾದಾಗ ಮೊದಲು ನೆನಪಾಗುವುದು ಅಮ್ಮ, ಏನೇ ಬೇಕಾದರೂ ಕರೆಯುವುದು ಅಮ್ಮ, ಅಮ್ಮ ಎಂದು ಹೇಳದ ದಿನವಿಲ್ಲ, ಪ್ರತಿಯೊಬ್ಬ ಮಕ್ಕಳಿಗೂ ತಾಯಿಯೇ ಮೊದಲ ಗುರು, ಯಾವುದೇ ಸ್ವಾರ್ಥವಿಲ್ಲದೆ ಪ್ರೀತಿಸುವುದು ತಾಯಿ, ನಾವು ನಮ್ಮ ತಾಯಿಯನ್ನು ದೇವರು ಎಂದು ಪೂಜಿಸುತ್ತೇವೆ. ನಾವು ಈ ಭೂಮಿಗೆ ಬರಲು ಕಾರಣ ತಾಯಿ ಅಲ್ವಾ... ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ. ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಬಳೆ... ಈ ಒಂದು ಹಾಡು ಎಷ್ಟು ಅರ್ಥಗರ್ಭಿತವಾಗಿದೆ ಅಲ್ವಾ. ಪ್ರತಿಯೊಬ್ಬರಿಗೂ ತಾಯಿಯ ಬಗ್ಗೆ ಗೌರವ, ಪ್ರೀತಿ ಇದ್ದೇ ಇರುತ್ತದೆ. ಎಲ್ಲೋ ನಮ್ಮ ಕೋಪವನ್ನು ಅವರ ಮೇಲೆ ತೋರಿಸುವುದು ಒಳ್ಳೆದಲ್ಲ. ಅವರು ನಮ್ಮಿಂದ ಏನು ಬಯಸುತ್ತಾರೋ ಗೊತ್ತಿಲ್ಲ. ಆದರೆ ಅವರನ್ನು ಖುಷಿಯಿಂದ ನೋಡಿಕೊಳ್ಳಬೇಕು, ಈ ಜನ್ಮ ಸಿಕ್ಕಿದ್ದು ತಾಯಿಯಿಂದ. ತಾಯಿಯನ್ನು ಮರೆತರೆ ದೇವರು ನಮ್ಮನ್ನು ಮೆಚ್ಚಲ್ಲ ಅಷ್ಟೇ …
-ಮಿತ್ರ ಲೇಖ್ಯ
ಚಿತ್ರ ಕೃಪೆ: ಇಂಟರ್ನೆಟ್ ತಾಣ