ಒಂದು ಒಳ್ಳೆಯ ನುಡಿ (217)- ಮೂರಕ್ಕೆ ಮುಕ್ತಾಯ!

ಒಂದು ಒಳ್ಳೆಯ ನುಡಿ (217)- ಮೂರಕ್ಕೆ ಮುಕ್ತಾಯ!

ನಮಗೆಲ್ಲರಿಗೂ ಒಂದು ಅಭ್ಯಾಸ ಉಂಟು. ಯಾವುದೇ ಒಂದು ಕೆಲಸದಲ್ಲಿ ಪ್ರಯತ್ನ ಮಾಡುವಾಗ ಒಂದೆರಡು ಬಾರಿ ಮಾಡುತ್ತೇವೆ. ಅದು ಆಗದಿದ್ದರೆ ಮೂರನೇ ಸಲ ಪ್ರಯತ್ನಿಸುತ್ತೇವೆ ಮತ್ತೂ ಆಗದಿದ್ದರೆ ನಮ್ಮ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸುತ್ತೇವೆ. ಮೂರಕ್ಕೆ ಮುಕ್ತಾಯ ಅನ್ನುವ ಮಾತೊಂದಿದೆ. ಅಂದರೆ ಮೂರು ಬಾರಿಗಿಂತ ಹೆಚ್ಚು ಪ್ರಯತ್ನಿಸಬಾರದು. ಅದಕ್ಕೆ ಯಾವ ಬೆಲೆನೂ ಇರೋದಿಲ್ಲ. ಮೊದಲ ಬಾರಿ ಸೋತಾಗ ನಮಗೆ ಸೋಲಿನ ಅನುಭವ ಗೊತ್ತಾಗುತ್ತದೆ. ಎರಡನೇ ಬಾರಿ ಸೋತಾಗ ನಮ್ಮ ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ.

ಮೂರನೆ ಸಲ ಎಲ್ಲಾ ಸರಿಯಿದ್ದು ತಪ್ಪನ್ನು ತಿದ್ದಿಕೊಳ್ಳದೇ ಮತ್ತೂ ಸೋತರೆ ಅವರು ದುರ್ಬಲರು ಮತ್ತು ಮೂರ್ಖರು. ಮೂರ್ಖರು ಎಷ್ಟೇ ಪ್ರಯತ್ನಿಸಿದರೂ ಅವರ ಕೆಲಸ ಆಗುವುದಿಲ್ಲ. ಕಾರಣ ಅವರಲ್ಲಿ ಶ್ರದ್ಧೆ ಹಾಗೂ ಛಲ ಎರಡೂ ಇರುವುದಿಲ್ಲ. ಮಾಡಬೇಕಲ್ಲಾ, ಅಂತ ಬೇರೆಯವರ ಒತ್ತಾಯದ ಮೇರೆಗೆ ಮಾಡುತ್ತಾರೆ. ಮೂರಕ್ಕೆ ಮುಕ್ತಾಯ ಬರೀ ಪ್ರಯತ್ನಕ್ಕೆ ಅನ್ವಯಿಸುವುದಿಲ್ಲ. ನಾವು ದೇವಸ್ಥಾನ ಅಥವಾ ಪೂಜೆ ಮಾಡುವಾಗ ಮೂರು ಬಾರಿ ತೀರ್ಥ ಕೊಡುತ್ತಾರೆ. ನಾಲ್ಕನೇ ಬಾರಿ ಬ್ರಹ್ಮಾರ್ಪಣೆ ಬಿಟ್ಟೂ ಪೂಜೆ ನಿಲ್ಲಿಸುತ್ತಾರೆ. ನಾವು ಸ್ಪರ್ಧೆಯಲ್ಲಿ ಗೆದ್ದಾಗ ಪ್ರಥಮ, ದ್ವಿತೀಯ ಮತ್ತು ತೃತೀಯ ಅಂತ ಮೂವರಿಗೆ ಮಾತ್ರ ಬಹುಮಾನ ಕೊಡುತ್ತಾರೆ. ನಾಲ್ಕನೇ ಬಹುಮಾನ ಕೊಟ್ಟಿದ್ದು ನಾವು ಎಲ್ಲಿಯೂ ನೋಡಿಲ್ಲ. ಈ ಮೂರಿನ ಜೊತೆ ನಮಗೆ ಯಾವ ಜನ್ಮದ ನಂಟು ಇದೆಯೋ ಗೊತ್ತಿಲ್ಲ. ಒಟ್ಟಾರೆಯಾಗಿ ಎಲ್ಲವನ್ನೂ ನಿಲ್ಲಿಸಿ ಬಿಡುತ್ತೇವೆ. 

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ