ಒಂದು ಒಳ್ಳೆಯ ನುಡಿ (221) - ಮಾತನಾಡುವ ಕಲೆ

ಒಂದು ಒಳ್ಳೆಯ ನುಡಿ (221) - ಮಾತನಾಡುವ ಕಲೆ

ಎಲ್ಲರಿಗೂ ಮಾತನಾಡುವ ಕಲೆ ಇರುವುದಿಲ್ಲ. ಮಾತನಾಡುವ ಕಲೆ ಅಂದರೆ ಬರೀ ಮಾತನಾಡುವುದು ಅಲ್ಲ, ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಭಾಷಣ ಮಾಡುವಾಗ ಮಾತನಾಡಲು ಗೊತ್ತಿರಬೇಕು. ಒಟ್ಟಾರೆಯಾಗಿ ಏನೇನೋ ಅರ್ಥವಿಲ್ಲದೆ ಮಾತನಾಡಿದರೆ ಅದಕ್ಕೆ ಕಲೆ ಅನ್ನುವುದಿಲ್ಲ. ಹಾಗೆ ಎಲ್ಲರಿಗೂ ಸರಾಗವಾಗಿ ಮಾತನಾಡುವುದಕ್ಕೂ ಆಗುವುದಿಲ್ಲ. ಅಥವಾ ವೇದಿಕೆ ಮೇಲೆ ಹತ್ತಿದಾಗ ನಮಗೆ ಏನೋ ಒಳಗೊಳಗೆ ಭಯ ಶುರುವಾಗುತ್ತದೆ. ಮತ್ತೆ ಕೆಲವರು ಏನು ಹೇಳಬೇಕೋ ಅದನ್ನು ಬರೆದುಕೊಂಡು ಹೋಗಿ ಅದನ್ನೇ ಓದಿ ಬರುತ್ತಾರೆ.

ವೇದಿಕೆಯ ಮೇಲೆ ಹೋದಾಗ ನಮಗೆ ಅನಿಸಿದ್ದನ್ನು ಹೇಳುತ್ತಾ ಹೋಗುವುದಕ್ಕೆ ಹಾಗೂ ಪ್ರೇಕ್ಷಕರು ಕೇಳುವ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಉದಾಹರಣೆಗೆ ಕೆಲವು ಕಡೆ ಮಾತನಾಡುವುದಕ್ಕೆ ವಾಗ್ಮಿಗಳನ್ನು ಕರೆಯುತ್ತಾರೆ. ಅದರರ್ಥ ನಮಗೆ ಮಾತನಾಡಲು ಗೊತ್ತಿಲ್ಲ ಅಂತ ಅಲ್ಲ. ಆದರೆ ವಾಗ್ಮಿಗಳು ಮಾತನಾಡುವ ಶೈಲಿ, ವಿಚಾರಗಳನ್ನು ಮನಮುಟ್ಟಿಸುವ ರೀತಿ ಬೇರೆ ರೀತಿಯೇ ಇರುತ್ತದೆ. ಅವರು ವಿಚಾರಗಳನ್ನು ಹೇಳಿದಾಗ ಎಲ್ಲವೂ ಹೌದು ಅಂತ ಅನಿಸುತ್ತದೆಅನಿಸುತ್ತದೆ. ನಮಗೆ ಗೊತ್ತಾಗದೆ ನಮ್ಮಲ್ಲೇ ಬದಲಾವಣೆ ತರುವಂತೆ ಮಾತನಾಡುವ ಶಕ್ತಿ ಅವರಲ್ಲಿದೆ. ನಿಜವಾಗಿಯೂ ಹೇಳಬೇಕೆಂದರೆ ಈ ಕಲೆ ದೇವರು ಕೊಟ್ಟ ವರ. ಸಿಕ್ಕಿದವರು ತುಂಬಾ ಅದೃಷ್ಟವಂತರು. ಯಾಕೆಂದರೆ ಅವರು ಆಡುವ ಮಾತುಗಳಿಂದ ಹಲವರ ಜೀವನ ಬದಲಾಗುತ್ತದೆ ಅಂದರೆ ಅದು ನಿಜಕ್ಕೂ ಒಳ್ಳೇ ಕೆಲಸವೇ. ನಮ್ಮಲ್ಲಿ  ಮಾತನಾಡುವ ಕಲೆಯನ್ನು ಬೆಳೆಸಿದರೆ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತೇವೆ. ಅವರು ಇನ್ನಷ್ಟು ಜನರಿಗೆ ಮಾದರಿಯಾಗುತ್ತಾರೆ. 

-ಆಯುಷಿ ನಾಯಕ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ