ಒಂದು ಒಳ್ಳೆಯ ನುಡಿ (226) - ಅಜ್ಜಿಯ ಕತೆ
ನಿನ್ನೆ ಹೀಗೆ ಯಾರೋ ಬರೆದ ಕತೆ ಓದುತ್ತಾ ಕುಳಿತಿದ್ದೆ. ಒಬ್ಬಳು ಅಜ್ಜಿ ಊರಲ್ಲಿ ಭಿಕ್ಷೆ ಬೇಡುತ್ತಾ ಬರುತ್ತಿದ್ದಳಂತೆ. ಹಾಗೆಯೇ ಬರುವಾಗ ಒಂದು ಮನೆಯ ಮುಂದೆ ಭಿಕ್ಷೆ ಕೇಳಿದಳು. ಆ ಮನೆಯಲ್ಲಿದ್ದ ತುಂಬು ಗರ್ಭಿಣಿ ಅನ್ನ ತಂದು ಕೊಟ್ಟಾಗ “ಏನೂ ಹೆದರಬೇಡ, ಹೆರಿಗೆಯಾಗುವಾಗ ಹೆಚ್ಚು ನೋವೇನೂ ಆಗುವುದಿಲ್ಲ" ಅಂದಳಂತೆ.
ಆದರೆ ಅವಳು ಕೊನೆಗೊಂದು ಹೇಳಿದ ಮಾತು ಕೇಳಿ ಕರುಳು ಕಿವುಚಿದಂತಾಯಿತು. “ಮಕ್ಕಳಿದ್ದೂ ಭಿಕ್ಷೆ ಬೇಡಿ, ಅನ್ನ ಉಣ್ಣುವಾಗ ಆಗುವಷ್ಟು ನೋವು ಹೆರುವಾಗ ಖಂಡಿತಾ ಆಗುವುದಿಲ್ಲ" ಅಂತ. ನಿಜವಲ್ವಾ, ತಂದೆ, ತಾಯಿ ನಮ್ಮನ್ನು ಕಷ್ಟ ಪಟ್ಟು ಪ್ರೀತಿಯಿಂದ ಸಾಕಿ, ಸಲಹುತ್ತಾರೆ. ಆದರೆ ಮಕ್ಕಳು ಅವರು ಜೊತೆಗಿದ್ದರೆ ತಮ್ಮ ಘನತೆಗೆ ಕಮ್ಮಿಯಾಗುತ್ತೆ ಅಂತ ಮನೆಯಿಂದ ಹೊರಗೆ ಹಾಕುತ್ತಾರೆ. ಈ ವಯಸ್ಸಲ್ಲಿ ಹಿರಿಜೀವಗಳಿಗೆ ಕಷ್ಟಕೊಡುವಂತಹ ಮಕ್ಕಳು ಹುಟ್ಟಲೇ ಬಾರದು.
-ಆಯುಷಿ ನಾಯಕ್
ಚಿತ್ರ ಕೃಪೆ: ಇಂಟರ್ನೆಟ್ ತಾಣ