ಒಂದು ಒಳ್ಳೆಯ ನುಡಿ (231) - ಗುರು ಪೂರ್ಣಿಮಾ

ಒಂದು ಒಳ್ಳೆಯ ನುಡಿ (231) - ಗುರು ಪೂರ್ಣಿಮಾ

* ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ. ಮಹಾಭಾರತವನ್ನು ನೀಡಿ ಹಾರೈಸಿದ ವ್ಯಾಸಮಹಾಋಷಿಗಳ ಜನ್ಮದಿನ ಗುರುಪೂರ್ಣಿಮೆಯ ದಿನವಿಂದು.

* ಗುರು ಕರುಣೆಯೆಂಬುದು ಅನನ್ಯವಾದದ್ದು. ಅದರಲ್ಲಿ ಎಲ್ಲಾ ಸುಖದುಃಖಗಳೂ ಅಡಗಿ, ಹೊರಹೊಮ್ಮಿವೆ. ಗುರುಗಳ ಆಶೀರ್ವಾದದ ಶ್ರೀ ರಕ್ಷೆ ಸದಾ ಇರಲಿ.

* ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ - ದಾಸವಾಣಿ

* ನೈತಿಕ ಮೌಲ್ಯಗಳ ಸಾರ ಗುರುವಿನ ಮಾತಿನ ಓಘ.

* ಗುರುವಿನ ನಾಮಕ್ಕೆ ಸಾವಿಲ್ಲ. ಇದ್ದರು ಇಲ್ಲದಿದ್ದರೂ ಗುರುವೇ.

* ಗುರು ಪೀಠ, ಗುರು ಪರಂಪರೆಗೆ ನಮೋ ನಮಃ.

* ಗುರಿಯನ್ನು ಎದುರಿಗೆ ತೋರಿಸಿ ಬೆನ್ನ ಹಿಂದೆ ನಿಂತು, ಹೀಗೆ ಹೋದರೆ, ಹೀಗೆ ಆಗುವೆ ಎಂಬ ಆಶಯ, ಆಸೆ, ಆಕಾಂಕ್ಷೆ ಮನದಲ್ಲಿ ಬಿತ್ತಿದ ಮಹಾನುಭಾವನೆಂದರೆ ಗುರು. ಗುರುಗಳಿಗೆ ಕೃತಜ್ಞತೆ ಅರ್ಪಿಸುವ, ಸ್ವಲ್ಪವಾದರೂ ಋಣಭಾರ ತಗ್ಗಿಸುವ ದಿನ.

* ಬೆಳಗುವ ಬೆಳಗಿಸುವ ದಿವ್ಯ ಜ್ಯೋತಿ, ಸರ್ವಮಾನ್ಯನಾದ ಗುರುವಿನ ಪಾದಗಳಿಗೆ ನಮಸ್ಕಾರಗಳು.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ