ಒಂದು ಒಳ್ಳೆಯ ನುಡಿ - 234

ಒಂದು ಒಳ್ಳೆಯ ನುಡಿ - 234

ನಮ್ಮ ನಾಡಿನಲ್ಲಿ ಮತ್ತು ದೇಶದಲ್ಲಿ ಯಾವುದೇ ಪಕ್ಷವು ಆಡಳಿತ ಮಾಡುತ್ತಿರುವ ಕಾಲದಲ್ಲಿ ಅವರ ವೈಫಲ್ಯಗಳನ್ನು ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡಲು ಹೋದರೆ, ಅವರ ದೃಷ್ಟಿಯಲ್ಲಿ ನಾವು  ರಾಜ್ಯದ ಮತ್ತು ದೇಶದ ಒಳಗಿನ ದ್ರೋಹಿಗಳೆಂದು ಆಡಳಿತದಲ್ಲಿರುವವರು ತಮ್ಮ ಜನಸಾಮಾನ್ಯ ಕಾರ್ಯಕರ್ತರ ಮನಸ್ಸಿನಲ್ಲಿ ಮೂಡಿಸುತ್ತಾರೆ. ಆ ಮೂಲಕ ತಮ್ಮ ಮೂರು ತಲೆಮಾರುಗಳು ಕೂತು ತಿಂದರೂ ಮುಗಿಯದಂತಹ ಆಸ್ಥಿಯನ್ನು ಸಂಪಾದಿಸುತ್ತಾರೆ. ಜೈ ಹೊ!

ಮೂರ್ಖರು, ರಬ್ಬರ್ ಗಿಡಗಿಳಿದ್ದಂತೆ! ಹತ್ತು ಮೂರ್ಖರ ಜೊತೆ ಒಬ್ಬ ಜಾಣನಿದ್ದರೂ , ಅವನನ್ನೂ ಜನ ಮೂರ್ಖನೆಂದೇ ಹೇಳುತ್ತಾರೆ ! 

ಈ ಜಗತ್ತಿನಲ್ಲಿ ಜಾಣನಾಗಿರು, ಆದರೆ ಮೂರ್ಖರ ಜೊತೆ ಸೇರದಿರು! 

ಹಸಿವೆಯಾದಾಗ ಕರೆದು ಉಪ್ಪಿಟ್ಟು ಕೊಟ್ಟವರ ಮನೆಯ ಜಗುಲಿಗೆ ತುಪ್ಪಿ ಬರಬೇಡಿ, ತುಪ್ಪ ಸವರಿ ಬನ್ನಿ ! 

ನನ್ನ ಪಾದದಡಿಯ ಹೆಜ್ಜೆಯ ಗುರುತಲ್ಲಿ ನಾನೇನು ಎನ್ನುವ ಇತಿಹಾಸವೇ ಇರುತ್ತದೆ ! ನನ್ನ ಹೆಜ್ಜೆಗಳ ಗುರುತಿರುವಲ್ಲಿ ಬದ್ಧತೆಯೂ ಇರಲಿ ! 

ಹಿರಿಯರು ಆಕಾಶವಾಣಿಗಳಾದರೆ, ಇಂದಿನ ಮಕ್ಕಳು ದೂರದರ್ಶನಗಳು ಮುಂದಿನ ಮಕ್ಕಳು ಚಂದ್ರನಲ್ಲಿಳಿಯುವ ರಾಕೇಟುಗಳು!

ಜನರು, ಜನಪ್ರತಿನಿಧಿಗಳ ಮಾತನ್ನು ನಂಬಿ ನಂಬಿ ತಮ್ಮ ಸ್ವಂತಿಕೆಯನ್ನೇ ಮರೆತಿದ್ದಾರೆ ! ಒಬ್ಬ ಮನಷ್ಯನ ಮೌನ , ಸತ್ಯವನ್ನೇ ಪ್ರಚೋದಿಸುತ್ತದೆ , ಆದರೆ ಮಾತು ? ಸಂದರ್ಭಕ್ಕೆ ತಕ್ಕಂತೆ ಸತ್ಯ ಮತ್ತು ಸುಳ್ಳು ಎರಡನ್ನೂ ಹೇಳುತ್ತದೆ !

***

ಸಾವು ಜೀವನದಲ್ಲಿ ಹೇಳಿ ಕೇಳಿ ಬರುವುದಿಲ್ಲ. ಹಾಗೆಯೇ ಹುಟ್ಟು ಕೂಡಾ. ಕೆಲವರು ಉಪ್ಪರಿಗೆಯ ಮನೆಯೊಳಗೆ ಜನ್ಮ ತಾಳಿದರೆ ಇನ್ನು ಹಲವರು ಜೋಪಡಿಯಲಿ ಜನ್ಮ ತಾಳಬಹುದು. ಕಾಲಕ್ರಮೇಣ ಅವನವನು ಮಾಡಿಕೊಂಡ ವ್ಯವಸ್ಥೆಗನುಗುಣವಾಗಿ ಜೋಪಡಿಯವನು ಮಾಳಿಗೆಯ ಮನೆಯಲ್ಲಿರಬಹುದು ; ಮಾಳಿಗೆಯಲ್ಲಿದ್ದವನು ಜೋಪಡಿಯಲ್ಲಿ ವಾಸ ಮಾಡಲೂ ಬಹುದು. ಆದುದರಿಂದ ನಮ್ಮಲ್ಲಿರುವ ಅಹಂಗಳನ್ನು ತೊರೆದು ಎಲ್ಲರ ಜೊತೆಗೆ ಒಳ್ಳೆಯ ರೀತಿಯಲ್ಲಿ ಬದುಕಿ ಬಾಳುವುದನ್ನು ಕಲಿಯೋಣ.

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ