ಒಂದು ಒಳ್ಳೆಯ ನುಡಿ -237
* ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ
* ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ
* ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ
* ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ
* ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ : ಪರೋಪಕಾರ
* ಅತ್ಯಂತ ಶ್ರೇಷ್ಠ ಸ್ವಭಾವ: ತಾಳ್ಮೆ
* ಅತ್ಯಂತ ಕೆಟ್ಟಗುಣ: ಪರನಿಂದೆ
* ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ: ಅಜೀರ್ಣ
* ಚಟಗಳಲ್ಲಿ ಅತೀ ಕೆಟ್ಟ ಚಟ: ಚಾಡಿ ಹೇಳುವದು
* ಬಂಧುಗಳಲ್ಲಿ ಶ್ರೇಷ್ಠ ಬಂಧು: ವಿಶ್ವಾಸ
* ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ: ಅಹಂಕಾರ
* ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ: ದೈವಬಲ
* ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ: ಆಧ್ಯಾತ್ಮಿಕ ಶಿಕ್ಷಣ
* ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು: ಸಾಲಬಾಧೆ
* ಹುಚ್ಚುಗಳಲ್ಲಿ ಅತೀ ಕೆಟ್ಟಹುಚ್ಚು: ಹೊಗಳಿಸಿಕೊಳ್ಳುವದು
* ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ: ಆತ್ಮವಿಶ್ವಾಸ
* ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು: ಅಜ್ಞಾನ
* ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ: ಸಜ್ಜನರ ನಿಷ್ಕ್ರಿಯತೆ
* ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ: ನಾಲಿಗೆ
* ವರಗಳಲ್ಲಿ ಅತೀ ದೊಡ್ಡ ವರ: ಆರೋಗ್ಯ
* ದೊಡ್ಡ ಶ್ರೀಮಂತಿಕೆ: ಸಂತೃಪ್ತಿ
* ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ(ಎರಡೂ): ಮೌನ
(ಸಂಗ್ರಹ) - ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ