ಒಂದು ಒಳ್ಳೆಯ ನುಡಿ -237

ಒಂದು ಒಳ್ಳೆಯ ನುಡಿ -237

* ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ

* ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ

* ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ

* ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ

* ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ : ಪರೋಪಕಾರ

* ಅತ್ಯಂತ ಶ್ರೇಷ್ಠ  ಸ್ವಭಾವ: ತಾಳ್ಮೆ

* ಅತ್ಯಂತ ಕೆಟ್ಟಗುಣ: ಪರನಿಂದೆ

* ಬಹುತೇಕ ಎಲ್ಲಾ ರೋಗಗಳಿಗೆ ಮುಖ್ಯ ಕಾರಣ: ಅಜೀರ್ಣ

* ಚಟಗಳಲ್ಲಿ ಅತೀ ಕೆಟ್ಟ ಚಟ: ಚಾಡಿ ಹೇಳುವದು

* ಬಂಧುಗಳಲ್ಲಿ ಶ್ರೇಷ್ಠ ಬಂಧು: ವಿಶ್ವಾಸ

* ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ: ಅಹಂಕಾರ

* ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ: ದೈವಬಲ

* ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ: ಆಧ್ಯಾತ್ಮಿಕ  ಶಿಕ್ಷಣ

* ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು: ಸಾಲಬಾಧೆ

* ಹುಚ್ಚುಗಳಲ್ಲಿ ಅತೀ ಕೆಟ್ಟಹುಚ್ಚು: ಹೊಗಳಿಸಿಕೊಳ್ಳುವದು

* ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ:  ಆತ್ಮವಿಶ್ವಾಸ

* ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು: ಅಜ್ಞಾನ

* ಜಗತ್ತಿನ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ: ಸಜ್ಜನರ ನಿಷ್ಕ್ರಿಯತೆ

* ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ: ನಾಲಿಗೆ

* ವರಗಳಲ್ಲಿ ಅತೀ ದೊಡ್ಡ ವರ: ಆರೋಗ್ಯ

* ದೊಡ್ಡ ಶ್ರೀಮಂತಿಕೆ: ಸಂತೃಪ್ತಿ

* ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ(ಎರಡೂ): ಮೌನ

(ಸಂಗ್ರಹ) - ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ