ಒಂದು ಒಳ್ಳೆಯ ನುಡಿ (24) - ಶ್ರೀ ಸುಬ್ರಹ್ಮಣ್ಯ ಸ್ತೋತ್ರ

ಒಂದು ಒಳ್ಳೆಯ ನುಡಿ (24) - ಶ್ರೀ ಸುಬ್ರಹ್ಮಣ್ಯ ಸ್ತೋತ್ರ

ಕವನ

ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಲಂಕೃತಂ/

ಶಕ್ತಿಂ ವಜ್ರಮಥೋ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಮ್/

ಪಾಶಂ ಕುಕ್ಕುಟಮಂಕುಶಂ ಚ ವರದಂ ದೋಭಿರ್ದಧಾನಮ ಸದಾ/

ದ್ಯಾಯೇದೀಪ್ಸಿತ ಸಿದ್ದಿದಂ ಶಿವಸುತಂ ಸ್ಕಂದಂ ಸುರಾರಾದಿತಮ್//

ಮಯೂರ ವಾಹನನು, ಆರು ಮುಖವ ಹೊಂದಿದವನು, ಮೂರು ಕಣ್ಣುಳ್ಳವನು, ಚಿತ್ರವರ್ಣದ ವಸ್ತ್ರವ ಧರಿಸಿ, ಶಕ್ತಿ, ವಜ್ರಾಯುಧ, ತ್ರಿಶೂಲ, ಕೊಡಲಿ, ಬಿಲ್ಲು, ಪಾಶ, ಅಂಕುಶ, ಅಭಯಹಸ್ತಗಳನ್ನು ಹೊಂದಿದ, ಇಷ್ಟಾರ್ಥಗಳನ್ನು ನೀಡುವವನು, ಸಿದ್ಧಿಪ್ರಧಾನವಾದ ದೇವತೆಗಳಿಂದಲೂ ವಂದಿತನಾದ ಶಿವಪುತ್ರ ಸ್ಕಂದನಿಗೆ, ಶ್ರೀ ಸುಬ್ರಹ್ಮಣ್ಯನಿಗೆ ನಮಸ್ಕಾರಗಳು. ಅವನ ಧ್ಯಾನವನ್ನು ಮಾಡೋಣ.

(ಸಂಗ್ರಹ:ಸ್ಕಂದ ಪುರಾಣ)

***

ನಮ್ಮ ಕಷ್ಟ, ನಾವು ಪಡುವ ಶ್ರಮ, ಪ್ರಯತ್ನ, ನೋವು, ನಲಿವು, ಹತಾಶೆ ಇವುಗಳನ್ನು ಗಮನಿಸುವಷ್ಟು ಕೆಲವು ಜನರಿಗೆ ಪುರುಸೊತ್ತಿರುವುದಿಲ್ಲ. ಹಾಗೆಂದು ನಾವು*ತಪ್ಪು ಹೆಜ್ಜೆ* ಗಳನ್ನಿಟ್ಟಾಗ ಬೇಗ ಗಮನಿಸಿ ಹೇಳುತ್ತಾರೆ. ನಾವಿಡುವ ಪ್ರತಿ ಹೆಜ್ಜೆ ಸಹ ಎಚ್ಚರಿಕೆಯಿಂದಿರಬೇಕು. ತಪ್ಪಿದರೆ ಅಪಾಯ ಖಂಡಿತ. ನಾವು ತೋಡಿದ ಹಳ್ಳಕ್ಕೆ ನಾವೇ ಬೀಳಬೇಕಾಗಬಹುದು.

 

-ರತ್ನಾ ಭಟ್ ತಲಂಜೇರಿ

 

ಚಿತ್ರ್