ಒಂದು ಒಳ್ಳೆಯ ನುಡಿ (242) - ಬೀಚಿಯವರ ನುಡಿಗಳು

ಒಂದು ಒಳ್ಳೆಯ ನುಡಿ (242) - ಬೀಚಿಯವರ ನುಡಿಗಳು

ಶ್ರೀ ಬೀ.ಚಿ.ಯವರ ಶುಚಿಯಾದ ನುಡಿಗಳು. 

* ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನೂ ಭಿಕ್ಷುಕನೆ....

* ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಃ ಸಕ್ಕರೆಯಂತೆ ಸುರಿದುಕೂಳ್ಳಬಾರದು .

* ಶ್ರೀಮಂತನ "ಕ್ಷಯ"ವೇ ಡಾಕ್ಟರ್ ನ "ಆಕ್ಷಯ" ಪಾತ್ರೆ.

* ವರ್ಷಕ್ಕೊಮ್ಮೆ ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.

* ಬಾಳಿನ ವ್ಯಾಕರಣ. 

  ಹೆಣ್ಣು--ಪದ್ಯ

  ಗಂಡು--ಗದ್ಯ.

  ಮಕ್ಕಳು--ವ್ಯಾಕರಣ. 

* ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ.

* ಮನೆ ನಿಂತಿರುವುದು

  ಮಡದಿಯಿಂದ. ಅದು ಬಿದ್ದರೆ

  ಗಂಡನ ತಲೆಮೇಲೆ. 

* ವಾರದಲ್ಲಿ ಮೂರು ದಿನ-

  ವಾದರೂ ನಗುತ್ತಿರಬೇಕು.. 

  ನಿನ್ನೆ, ಇಂದು, ನಾಳೆ

(ಸಂಗ್ರಹ) ಪ್ರಭಾಕರ ಅಡಿಗ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ