ಒಂದು ಒಳ್ಳೆಯ ನುಡಿ - 246

ಒಂದು ಒಳ್ಳೆಯ ನುಡಿ - 246

ಹಲವು ಕವಿಗಳ ಬೀಡಿದು, ವೀರ ಶೂರರ ನಾಡಿದು, ನಮ್ಮ ಕನ್ನಡ ನಾಡಿದು. ಎಷ್ಟು ಸತ್ಯವಲ್ಲವೇ? ಇವರೆಲ್ಲರ ನೆರಳಿನಡಿ ಬೆಳೆದ ನಾವು ಚಿಕ್ಕ ಬಿಂದುಗಳಾಗಿ ಸಾಹಿತ್ಯದ ಕೈಂಕರ್ಯ ಕೈಗೊಂಡು ಕನ್ನಡಮ್ಮನ ಸೇವೆಯನ್ನು ಮಾಡಿದರೆ ಅಳಿಲ ಸೇವೆಯಾಗಬಹುದು. ಎಲ್ಲಾ ಜೀವಜಂತುಗಳಂತೆ ಬದುಕಿದರೆ ಅದಕ್ಕೆ ಅರ್ಥವಿಲ್ಲ ಅಲ್ಲವೇ? ಹುಟ್ಟಿ ಬಂದ ಮೇಲೆ ಕಿಂಚಿತ್ ಏನನ್ನಾದರೂ ಸನ್ಮಾರ್ಗದಲ್ಲಿ ಸಾಧಿಸಬೇಕು. ಅಡ್ಡದಾರಿ ಬೇಡವೇ ಬೇಡ, ಅದಕ್ಕೆ ಮೌಲ್ಯವೂ ಇಲ್ಲ.ಯಾರೂ ಮೆಚ್ಚಲಾರರು. ಕನ್ನಡಕ್ಕೆ ಸರಿಯಾದ ಸ್ಥಾನಮಾನ ನಾವೇ (ಕನ್ನಡಿಗರೇ) ಕೊಡಬೇಕಷ್ಟೆ. ಭಾವವಿಕಾಸವಾಗುವ ವಿದ್ಯೆ ಬೇಕು, ಅದಕ್ಕೆ ತಾಯಿಭಾಷೆ ಬೇಕು. ನಮ್ಮ ತಾಯಿ ಭಾಷೆ ಕನ್ನಡ, ಅದನ್ನು ಉಳಿಸಿ ಬೆಳೆಸೋಣ. ಡಾ.ಡಿ.ವಿ.ಗುಂಡಪ್ಪನವರು ಬರೆದಂತೆ ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ- ಹೇದೇವ

ಎಲ್ಲೇ ಜನಿಸಲಿ, ಎಲ್ಲೇ ಜೀವಿಸಲಿ, ನಮ್ಮ ಪ್ರೀತಿಯ ಕನ್ನಡ ಭಾಷೆಯನ್ನು ಮರೆಯದಿರೋಣ. ನಮ್ಮ ಪರಿಸರ, ನಮ್ಮ ಜನ, ನಮ್ಮ ಭಾಷೆ, ನಮ್ಮ ನೆರಹೊರೆ, ನಮ್ಮ ನಾಡನ್ನು ನಾವೇ ಪ್ರೀತಿಸುವ ಮನಸ್ಸನ್ನು ಆ ಭಗವಂತ ಸದಾ ನೀಡಿ ಹರಸಲಿ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ