ಒಂದು ಒಳ್ಳೆಯ ನುಡಿ - 255

* ನನ್ನ ದುಸ್ಥಿತಿಗೆ , ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ !
* ಒಬ್ಬ ಬರಹಗಾರ ತನ್ನಂತೇ ಉತ್ತಮ ರೀತಿಯಲ್ಲಿ ಬರೆಯುವ ಹತ್ತಾರು ಬರಹಗಾರರನ್ನು ಹುಟ್ಟು ಹಾಕಿದರೆ ; ಅವನ ಕಾಲಾನಂತರ ಅದು ಸಾವಿರಾರು ಆಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ !
* ಬರಹಗಳು (ಅಪವಾದಗಳನ್ನು ಹೊರತು ಪಡಿಸಿ) ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ನೀಡುವ ಕಠಿಣ ಪದಗಳಂತೆ ಇರಬಾರದು. ಹಾಗೆ ಇದ್ದರೆ ? ಓದುಗರು ತಮ್ಮ ಹತ್ತಿರ ಕನ್ನಡ ರತ್ನಕೋಶವನ್ನು ಇಟ್ಟುಕೊಂಡು ಓದಬೇಕಾದ ಪರಿಸ್ಥಿತಿ ಬರುವುದು. ಇದರಿಂದಾಗಿ ಓದುಗರ ಓದುವ ಹವ್ಯಾಸ ದಿನಕಳೆದಂತೆ ಕುಂಠಿತವಾಗುತ್ತದೆ.
* ಹೊಳೆವ ವಿಷಯದಾಳದ ಅರಿವಿದ್ದರೆ ಬರೆಯೋಣ, ಇಲ್ಲದಿದ್ದರೆ ಕಲಿತು ಬರೆಯೋಣ, ಅದೂ ಆಗದಿದ್ದರೆ ಸುಮ್ಮನಿರೋಣ ! ಯಾಕೆಂದರೆ ಅದರಿಂದ ನಮಗೂ ಕ್ಷೇಮ ; ಅಂತಹ ಬರಹಗಳನ್ನು ಓದುವ ಓದುಗರಿಗೆ ಇನ್ನೂ ಕ್ಷೇಮ !
* ಯಾವ ವಿಷಯವೂ ಹೊರ ನೋಟಕ್ಕೆ ಬಹು ಸುಲಭವಾಗೇ ಕಾಣುತ್ತವೆ, ಹತ್ತಿರ ಹೋದಾಗಲೇ ಅದರ ಅರಿವು ನಮಗಾಗುತ್ತದೆ ಮತ್ತು ಅದರಲ್ಲಿ ನಾವಿನ್ನೂ ದಡ್ಡರೆಂದು ತಿಳಿಯುತ್ತದೆ !
* ಬರಹಗಳ ಮೂಲವನ್ನು ಕೆದಕುವುದೂ ಒಂದೇ ಪುರಾಣಗಳ ಮೂಲವನ್ನು ಅರಿಯಲೆತ್ನಿಸುವುದೂ ಒಂದೆ. ಎರಡೂ ನಮ್ಮ ಯೋಚನೆಯಾಳಕ್ಕೆ ಹೊಳೆಯಲಾರದ, ಸಿಗಲಾರದ ರತ್ನಗಳೇ ಆಗಿವೆ ; ಆಗಿದೆ .
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ