ಒಂದು ಒಳ್ಳೆಯ ನುಡಿ - 256

ಒಂದು ಒಳ್ಳೆಯ ನುಡಿ - 256

ಬಳಗದ ಬಂಧುಗಳಿಗೆಲ್ಲ ವೈಕುಂಠ ಏಕಾದಶಿಯ ಶುಭಾಶಯಗಳು

ಅಯಂ ಸರ್ವೇಷ್ಟದಾತಾ ಮೇ

ಸರ್ವಾಭೀಷ್ಟ ಪ್ರದಾಯಕ:/

ಸರ್ವೋತ್ಕೃಷ್ಟೋಯಮೇವೈಕ:

ತ್ವದೀಯೋ ಹಂಸಮೇ ಪತಿ://

"ನಮ್ಮೆಲ್ಲರ ಅಪೇಕ್ಷೆಗಳು ಭಗವಂತನಿಗೆ ತಿಳಿದಿದೆ. ಅದನ್ನು ಈಡೇರಿಸುವವನು, ಸರ್ವ ಶ್ರೇಷ್ಠನೂ ಆದ ಭಗವಾನ್ ವಿಷ್ಣುವಿನ ಸ್ಮರಣೆ ಮಾಡಿ ಪುನೀತರಾಗೋಣ."

ಶಾಶ್ವತವಾದ ಸ್ಥಳ ವೈಕುಂಠವನ್ನೇ ಎಲ್ಲರೂ ಬಯಸುವರಂತೆ. ಅದು ಭಗವಾನ್ ಮಹಾವಿಷ್ಣುವಿನ ಸನ್ನಿಧಿಯಂತೆ. ವೈಕುಂಠದ ಬಾಗಿಲು ತೆಗೆಯುವ ಈ ಶುಭದಿನವೇ 'ವೈಕುಂಠ ಏಕಾದಶಿ'. ಮನದ ಕ್ಲೇಶಗಳನ್ನು ಕಳೆದು, ಪೂಜೆ ಉಪವಾಸ ವ್ರತನೇಮಗಳನ್ನಾಚರಿಸಿ ಶ್ರದ್ಧಾಭಕ್ತಿಗಳಿಂದ ಹರಿನಾಮ ಸ್ಮರಣೆ ಮಾಡಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ಎಸಗಿದ ಪಾಪಕರ್ಮಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಸಕ್ತ ದಿನವಿಂದು. ಕಷ್ಟ ನಷ್ಟ ಸುಖ ಸಂತೋಷ ಸಾಮಾನ್ಯ. ಸುಖವನ್ನೇ ಬಯಸಿದರೆ ಹೇಗೆ? ಕಷ್ಟ ಬರಬೇಡವೆಂದರೂ ಬಾರದೆ ಇರದು. ಬಂದಾಗ "ಅದನ್ನು ಎದುರಿಸುವ ಶಕ್ತಿ ಕೊಡು ಭಗವಂತ" ಎಂದು ಕೇಳಿಕೊಳ್ಳ‌ಬೇಕು. ಈ ಶುಭದಿನದಂದು ಭಗವಾನ್ ಮಹಾವಿಷ್ಣುವನ್ನು ಸ್ಮರಿಸುವ ಮೂಲಕ ಧನ್ಯತೆಯನ್ನು ಹೊಂದೋಣ.

ಓಂ ನಮೋ ಭಗವತೇ ವಾಸುದೇವಾಯ ನಮ:

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ