ಒಂದು ಒಳ್ಳೆಯ ನುಡಿ - 258

ಒಂದು ಒಳ್ಳೆಯ ನುಡಿ - 258

ನಾವು "ವೃದ್ಧರಾಗಬಾರದು, ಹಿರಿಯರಾಗಬೇಕು" ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ನಾವು ಈ ಅಮೂಲ್ಯ ಜೀವನವನ್ನು ಪೂರ್ತಿಯಾಗಿ ಆನಂದಿಸಬೇಕು.

* ಒಬ್ಬ ವ್ಯಕ್ತಿಯು ವಯಸ್ಸಾದಾಗ 'ವೃದ್ಧ ಅಲ್ಲ ‘ಹಿರಿಯ’ನಾಗಬೇಕು.

* "ವೃದ್ಧಾಪ್ಯ" ಇತರ ಜನರನ್ನು ಆಧಾರಕ್ಕಾಗಿ ಹುಡುಕುತ್ತದೆ."ಹಿರಿತನ" ಜನರಿಗೆ ಆಧಾರ ನೀಡುತ್ತದೆ.

* " ವೃದ್ಧಾಪ್ಯ" ಮರೆಮಾಚಲು ಬಯಸುತ್ತದೆ. "ಹಿರಿತನ" ಬೆಳಕಿಗೆ ತರಲು ಬಯಸುತ್ತದೆ.

* “ವೃದ್ಧಾಪ್ಯ” ಸ್ವಲ್ಪ ಅಹಂಕಾರಿಯಾಗಿರುತ್ತದೆ. "ಹಿರಿತನ"* ಅನುಭವಿ, ವಿನಯಶೀಲ ಮತ್ತು  ಸಂಯಮಶೀಲವಾಗಿರುತ್ತದೆ.     

* "ವೃದ್ಧಾಪ್ಯ" ಹೊಸ ತಲೆಮಾರಿನ ವಿಚಾರಗಳಲ್ಲಿ ಕೈ ಹಾಕಿ ತಿದ್ದಲು ಹೊರಡುತ್ತದೆ. "ಹಿರಿತನ" ಯುವ ಪೀಳಿಗೆಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬದುಕಲು ಅನುವು ಮಾಡಿ ಕೊಡುತ್ತದೆ.

* "ವೃದ್ಧಾಪ್ಯ" ನಮ್ಮ ಕಾಲದಲ್ಲಿ ಹೀಗಿತ್ತು ಎಂದು ಚಿಟ್ಟು ಹಿಡಿಸುತ್ತದೆ. "ಹಿರಿತನ" ಬದಲಾಗುತ್ತಿರುವ ಕಾಲದೊಡನೆ ತನ್ನ ನಂಟು ಬೆಳೆಸುತ್ತದೆ ಮತ್ತು ಅದನ್ನು ತನ್ನದಾಗಿಸಿಕೊಳ್ಳುತ್ತದೆ.

* "ವೃದ್ಧಾಪ್ಯ" ಹೊಸ ಪೀಳಿಗೆಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುತ್ತದೆ. "ಹಿರಿತನ" ಯುವ ಪೀಳಿಗೆಯ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ.

* "ವೃದ್ಧಾಪ್ಯ" ಜೀವನದ ಸಂಜೆಯಲ್ಲಿ ಅದರ ಅಂತ್ಯವನ್ನು ಹುಡುಕುತ್ತದೆ. "ಹಿರಿತನ"ಜೀವನದ ಸಂಜೆಯಲ್ಲೂ ಹೊಸ ಉದಯವನ್ನು ಕಾಯುತ್ತದೆ ಹಾಗೂ ಯುವಕರ ಸ್ಫೂರ್ತಿಯಿಂದ ಪ್ರೇರಿತವಾಗುತ್ತದೆ.

* "ಹಿರಿತನ" ಮತ್ತು "ವೃದ್ಧಾಪ್ಯ"ಗಳ ನಡುವಿನ ವ್ಯತ್ಯಾಸವನ್ನು ಗಂಭೀರತಾಪೂರ್ವಕವಾಗಿ ಅರ್ಥ ಮಾಡಿಕೊಳ್ಳುವ ಮೂಲಕ ನಾವು ಈ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಮರ್ಥರಾಗುತ್ತೇವೆ.

ವಯಸ್ಸು ಎಷ್ಟೇ ಇರಲಿ ಸದಾ ಹೂವಿನಂತೆ ಅರಳಿ ಉಲ್ಲಾಸ, ಉತ್ಸಾಹಗಳಿಂದ ಬದುಕೋಣ. ಮತ್ತು ಇತರರ ಜೀವನಕ್ಕೆ ಸ್ಫೂರ್ತಿಯಾಗಿರೋಣ.

(ಸಂಗ್ರಹ) -ರವೀಶ್ ಕುಮಾರ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ