ಒಂದು ಒಳ್ಳೆಯ ನುಡಿ - (26) ಬಾಳಿಗೊಂದು ಅರಿವು

*ಗಾದೆಗಳು* (ನಾಣ್ನುಡಿ) ಎಂದರೆ, ನಮ್ಮ ಹಿರಿಯರು ತಮ್ಮ ಜೀವನಾನುಭವವನ್ನು ಆಡುಭಾಷೆಯಲ್ಲಿ ಪದಗಳ ಸಂಗ್ರಹ ಮೂಲಕ ರಚಿಸಿದ *ವಾಕ್ಯವೇ* ಆಗಿದೆ. ಗಾದೆಗಳ ಮೂಲಕ *ಜ್ಞಾನ, ತಿಳುವಳಿಕೆ, ಚುರುಕುತನ, ವಿಡಂಬನೆ, ಹಾಸ್ಯ, ಸಂಕ್ಷಿಪ್ತತೆ* ಸಿಗುತ್ತದೆ. ಇವು ಗಾದೆಯ ಲಕ್ಷಣಗಳು ಸಹ. ಸರಳ ಸುಂದರವಾದ, ಅರ್ಥಗರ್ಭಿತವಾದ ಪದಗಳು, ಮನೋಹರವಾದ ವಾಕ್ಯಗಳು, ಒಳನೋಟದ ಗೂಡಾರ್ಥಗಳು ಗಾದೆಯಲ್ಲಿವೆ. ಅನುಭವಗಳ ರಸಪಾಕವೇ ಗಾದೆ. *ಗಾದೆಗಳನ್ನು ವೇದಕ್ಕೆ ಸಮ* ಎಂದೂ ಹೇಳುತ್ತಾರೆ.
*ನಮ್ಮ ಮನಸ್ಸಿನಾಳದಲ್ಲಿ ಹುದುಗಿರುವ ಭಾವನೆಗಳನ್ನು ಗಾದೆಗಳು ಸೂಚಿಸುತ್ತವೆ.
*ದ್ವಂದ್ವಾರ್ಥಗಳನ್ನು ಸೂಚಿಸುತ್ತದೆ.
*ನೀತಿಯನ್ನು ಸಾರುತ್ತದೆ.
*ಸನ್ನಿವೇಶಗಳನ್ನು, ಸಂದರ್ಭಗಳನ್ನು, ಅರ್ಥವತ್ತಾಗಿ ಹೇಳುತ್ತದೆ.
*ಅಡಕವಾಗಿರುವ ಜೀವನಮೌಲ್ಯಗಳು ತ್ರಿಕಾಲ ಸತ್ಯವಾಗಿದೆ.
*ಕೆಲವೊಂದು ಸಂದರ್ಭಗಳಲ್ಲಿ ಹಾಸ್ಯ, ವಿಡಂಬನೆ, ಮೂಲಕ ಚುಚ್ಚುಮಾತುಗಳೂ ಇರುತ್ತವೆ.
*ಮಾತಿನ ಮೆರುಗು ಹೆಚ್ಚುತ್ತದೆ.
*ನೀತಿಪಾಠಗಳನ್ನು ಕಲಿಯಬಹುದು.
*ಬೆಲೆ ಬಾಳುವ ವಜ್ರದಂತಿವೆ.
*ಅನುಭವಾಮೃತ ಅಡಕವಾಗಿದೆ.
*ಸತ್ಯ ಶಾಶ್ವತ, ಸುಳ್ಳು ಕ್ಷಣಿಕ ಎಂಬುದು ಗಾದೆಗಳ ತಿರುಳು.
*ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಗಾದೆಗಳ ಬಗ್ಗೆ ತಿಳುವಳಿಕೆ ನೀಡಬೇಕು.
ಈ ಎಲ್ಲಾ ಅಂಶಗಳನ್ನೂ ಗಾದೆ ಒಳಗೊಂಡಿದೆ.
ನಾವು ಕಥೆ, ಘಟನೆ, ಸನ್ನಿವೇಶ, ಪ್ರಬಂಧ, ಸಾಹಿತ್ಯ ಪ್ರಕಾರಗಳಲ್ಲಿ ಒಂದಷ್ಟು *ಗಾದೆ ಮಾತುಗಳನ್ನು* ಅಳವಡಿಸಿದರೆ ಲೇಖನದ ವಾಕ್ಯಗಳಿಗೆ ಮೆರುಗು, ಚೆಲುವು ಹೆಚ್ಚುತ್ತದೆ.
(ಸಂಗ್ರಹ) ರತ್ನಾ ಭಟ್ ತಲಂಜೇರಿ