ಒಂದು ಒಳ್ಳೆಯ ನುಡಿ - 261

ಒಂದು ಒಳ್ಳೆಯ ನುಡಿ - 261

ಸರ್ವಜ್ಞ ಎನ್ನುವ ಹೆಸರಿನಿಂದ ತ್ರಿಪದಿಗಳನ್ನು ಲೋಕಮುಖಕ್ಕೆ ನೀಡಿದ, ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಕವಿ, ಪ್ರಚಾರ ಬಯಸದ, ಪ್ರಾಪಂಚಿಕ ಸುಖಕ್ಕೆ ಆಶಿಸದ, ಅದ್ಭುತ ಶೈಲಿಯ ಹಾಡುಗಾರ.

'ಕಣ್ಣು ನಾಲಗೆ ಮನವು ತನ್ನದೆಂದೆನಬೇಡ

ಅನ್ಯರು ಕೊಂದರೆನಬೇಡ ಇವು ಮೂರು

ತನ್ನ ಕೊಲುವುವು ಸರ್ವಜ್ಞ//'

ಮಾನವನ ನಡೆನುಡಿಯಿಂದಲೇ ಒಳ್ಳೆಯತನ ನಿರ್ಧಾರವಾಗುತ್ತದೆ. ಅವನ ಬದುಕು ಸಾಗುವುದಾಗಲಿ, ಕೆಡುವುದಾಗಲಿ ಅವನ ಕೈಬಾಯಿಗಳಿಂದಲೇ ಹೊರತು ಅನ್ಯರಿಂದಲ್ಲ. ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುವುದನ್ನು ಮೊದಲು ಬಿಡಬೇಕು. ಯಾರಾದರೂ ಒಬ್ಬರ ಬಗ್ಗೆ ಹೇಳಿದಾಗ ಆ ಮಾತಿನ ಬಗ್ಗೆ ಅರಿಯುವ ಮನಸ್ಸಿರಬೇಕು. ಕಣ್ಣುಮುಚ್ಚಿ ಯಾವುದನ್ನು ನಂಬಬಾರದು. ನಾವಾಡುವ ಮಾತುಗಳಿಗೆ,ಮಾಡುವ ಕೆಲಸಗಳಿಗೆ ಸ್ವಯಂ ಅಂಕುಶವಿರಲಿ, ಆಗ ಎಲ್ಲವೂ ಸುಗಮವಾಗಿರಬಹುದು.

(ಆಕರ:ಸರ್ವಜ್ಞ ವಚನ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ