ಒಂದು ಒಳ್ಳೆಯ ನುಡಿ - 267

ಯಾರೋ ಒಬ್ಬರು ಏನೋ ವಿಷಯ ಹೇಳಿದಾಗ ಅದನ್ನು ಪೂರ್ತಿ ಕೇಳಿ ಉತ್ತರಿಸುವಷ್ಟು ತಾಳ್ಮೆ ನಮ್ಮಲ್ಲಿಲ್ಲ. ಆಗ ಕೊಡುವ ತಕ್ಷಣದ ಪ್ರತಿಕ್ರಿಯೆಯಿಂದ ನಾವು 'ಮೂರ್ಖ'ರೆನಿಸಿಕೊಳ್ತೇವೆ. ಇಲ್ಲಿ ಬುದ್ಧಿ ಕಡಿಮೆಯಾದ ಮೂರ್ಖ ಅಲ್ಲ. ಒಂದು ರೀತಿಯ 'ತಮಾಷೆ,ಹಾಸ್ಯ,ನಗು' (ಎಪ್ರಿಲ್ ಒಂದರ ವಿಶೇಷ)ದ ಮೂರ್ಖ ಅಷ್ಟೆ. ನನ್ನ ಶಾಲಾ ಕರ್ತವ್ಯದ ಅವಧಿಯಲ್ಲಿ ಪುಟ್ಟ ಮಕ್ಕಳಿಂದಲೇ ಮೂರ್ಖಳಾದ್ದೂ ಇದೆ. ಇದೆಲ್ಲ ಕ್ಷಣಿಕದ ನಗು. ಒಂದು ಕ್ಷಣದ ನಗು ಸಹ ಆರೋಗ್ಯಕ್ಕೆ ಸಹಕಾರಿ. ಮನಸ್ಸಿನ ದುಃಖ ನಿವಾರಣೆಗೆ ರಹದಾರಿ. ಏನೋ ಯೋಚನೆಯಲ್ಲಿದ್ದಾಗ, ತಲೆಯೊಳಗೆ ಯಾವುದೋ ಒಂದು ವಿಷಯ ರಿಂಗಣಿಸುವ ಸಮಯದಲ್ಲಿ ಹೇಳಿದ್ದಕ್ಕೆ ಕೂಡಲೆ ಪ್ರತಿಕ್ರಿಯಿಸ್ತೇವೆ. ಆಗ ಸುಲಭದಲ್ಲಿ ಮೂರ್ಖರಾಗುತ್ತೇವೆ. 'ಹಗ್ಗ ಕಂಡರೂ ಹಾವೆಂದು ಹೌಹಾರುತ್ತೇವೆ. 'ಯಾವುದಾದರೂ ಎಲ್ಲೆ ಮೀರಿ ಜೀವಹಾನಿಯಾಗಬಾರದು. ವಿಪರೀತಕ್ಕೆ ಹೋಗದಂತೆ ಜಾಗ್ರತೆ ವಹಿಸಬೇಕು. ಮೂರ್ಖರಾಜನ ಕಥೆ ಕೇಳಿದ್ದೇವೆ ಅಲ್ಲವೇ? ಮೂರ್ಖರ ದಿನದ ಶುಭಾಶಯಗಳು.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ