ಒಂದು ಒಳ್ಳೆಯ ನುಡಿ - 269
* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ ಮಲಗಿರುತ್ತಾರೆ !
* ಹಿಂದೆ, ಹುಟ್ಟಿಸಿದ ಅಪ್ಪ ಅಮ್ಮನನ್ನ ಗೌರವಿಸಿ ಮಕ್ಕಳು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದರು ; ಇಂದು ಹಾಗಲ್ಲ ? ಹಲಕೆಲವು ಜನ ಬೂಟುಕಾಲಲ್ಲಿ ತುಳಿದೂ ತುಳಿದೂ ಅಪಹಾಸ್ಯ ಮಾಡುತ್ತಾ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದಾರೆ !
* ಮಗುವೊಂದರ ಬದುಕಿನ ಬೀಗ ಮತ್ತು ಬೀಗದ ಕೈಗಳೇ ಅವನ ತಂದೆ ಮತ್ತು ತಾಯಿ !
* ಈ ಪ್ರಪಂಚದಲ್ಲಿ ಒಬ್ಬ ಒಳ್ಳೆಯವ ಇದ್ದಾನೆಂದರೆ ಅವನ ತಂದೆ ತಾಯಿ ಎಷ್ಟು ಕಾರಣರಾಗುತ್ತಾರೋ ; ಕೆಟ್ಟವನೆಂದರೂ ಅಷ್ಟೇ ಕಾರಣರಾಗುತ್ತಾರೆ !
* ಮನುಷ್ಯನ ಹೊರ ರೂಪ ಯಾವ ಕ್ಷಣಕ್ಕೂ ಕೆಡ ಬಹುದು ಆದರೆ ಅವನು ಮಾಡಿದ ಒಳ್ಳೆಯ ಸಾಧನೆಗಳು ಅವನ ನಂತರವೂ ಉನ್ನತ ಸ್ಥಾನದಲ್ಲಿರುತ್ತವೆ !
* ಮನೆಯ ಯಜಮಾನನ “ದುಡಿಮೆ”ಯ ಬಗ್ಗೆ , ಸಮಾಜದಲ್ಲಿ ಅವನ ಬಗ್ಗೆ ಇರುವ “ಗೌರವ “ಏನೆಂಬುವುದನ್ನು ತಿಳಿಯದ ಮನೆ, ಕುಟುಂಬದಲ್ಲಿ ಯಾವತ್ತೂ ಅಶಾಂತಿ ನೆಲೆಸಿರುತ್ತದೆ !
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ