ಒಂದು ಒಳ್ಳೆಯ ನುಡಿ - 271
* ನಮ್ಮಜೊತೆ ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು, ಹುಟ್ಟಿದ ನಂತರದ ಬಾಲ್ಯ, ಯೌವನ, ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ !
* ಓ ಮಾರಾಯಾ, ಮಂಡೆ ಬೆಚ್ಚ ಆದರೆ ? ಮಂಡೆಯ ಮೇಲೆ ಒಂದು ಹಂಡೆಯನಿಟ್ಟು ನೀರು ಹಾಕು . ಸ್ವಲ್ಪ ಸಮಯ , ನೀರು ಬಿಸಿಯಾದ ಕೂಡಲೇ ಸ್ನಾನ ಮಾಡು, ಮಂಡೆ ಬೆಚ್ಚವೆಲ್ಲ ಗುಡ್ಡೆ ಹತ್ತುತ್ತದೆ ! ಐಡಿಯಾ ಚೆಂದ ಉಂಟು ಅಲ್ಲವಾ ?
* ಮನುಜ, ತನ್ನ ಶರೀರದ ಹೊರಗಿನ ಚೆಲುವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಹುದು ; ಆದರೆ ಒಳಗೂ ಸೌಂದರ್ಯ ಇದೆಯೆಂದು ಅರಿಯಲು ವಿದ್ಯೆಯೆನ್ನುವ ಕನ್ನಡಿ ಅತ್ಯಗತ್ಯ !
* ಹಣವೇ ಮುಖ್ಯವಾದ ಈ ಜಗತ್ತಿನಲ್ಲಿ ಮತ್ತೆಲ್ಲವೂ ಹೆಣವಾಯಿತು !
* ಬೆಳಕು ಕತ್ತಲೆಂಬ ಈ ಜಗತ್ತಿನಲ್ಲಿ ಮಾನವ ಜ್ಯೋತಿಯಾಗಬೇಕು !
-ಹಾ ಮ ಸತೀಶ ಬೆಂಗಳೂರು, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ