ಒಂದು ಒಳ್ಳೆಯ ನುಡಿ (274) - ಹೌದಲ್ವಾ!

ಒಂದು ಒಳ್ಳೆಯ ನುಡಿ (274) - ಹೌದಲ್ವಾ!

* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ 

ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರದ ಪಾತ್ರ ಗಣನೀಯ. ಈ ಕುರಿತು ತಿಳುವಳಿಕೆಯ ಶಿಕ್ಷಣದ ಅಗತ್ಯ ಮಕ್ಕಳಿಗಿಂತ ಪೋಷಕರು, ಶಾಲೆಗಳು ಹಾಗೂ ಸರ್ಕಾರಕ್ಕಿದೆ.

* ಯಾವುದೋ ಸಿನೆಮಾ ನೋಡಿ; ನಾಡು, ನುಡಿ, ಸಂಸ್ಕೃತಿ, ಅಸ್ಮಿತೆ ಎಂದೆಲ್ಲಾ ಬಡಬಡಿಸುವುದು ಬೋಳೆತನ ಅಷ್ಟೇ. ಇನ್ನು ನಾಡು-ನುಡಿಯ ಬಗ್ಗೆ ನವಂಬರಿನಲಿ ಆಡುವ ಆಡಂಬರದ ಮಾತುಗಳು ಕ್ಲೀಷೆಯಲ್ಲದೇ ಬೇರೇನೂ ಅಲ್ಲ. ಒಂದು ಭಾಷೆಯನ್ನು ಬಳಸದಿದ್ದರೆ ಕ್ರಮೇಣ ಆ ಭಾಷೆಯೊಂದಿಗೇ ಬೆಳೆದಿರುವ ಬದುಕು ನಮ್ಮ ಕಣ್ಣೆದುರೇ ಅವಸಾನವಾಗುತ್ತೆ. ಆತ್ಮವಿಮರ್ಶೆಗಿದು ಸಂಕ್ರಮಣದ ಕಾಲ.

* ತಪ್ಪನ್ನು ತಪ್ಪು ಅನ್ನುವುದರಲ್ಲಿ ತಪ್ಪಿಲ್ಲ ಆದರೆ ತಪ್ಪೇ ಇಲ್ಲದ ವಿಷಯಗಳಲ್ಲಿ ತಪ್ಪುಗಳನ್ನು ಹುಡುಕುವ ನಾಟಕವಾಡಿ ತಪ್ಪಿದೆಯೆಂದು ವಾದಿಸುವುದು ಮಹಾ ತಪ್ಪು ! ಹಾಗೆನ್ನುವವರ ಸಂಕುಚಿತ ಮನೋಭಾವನೆಯನ್ನ ತೋರಿಸುವುದರ ಜೊತೆಗೆ ಆ ವಿಷಯಗಳಲ್ಲಿ ತಾನಿನ್ನೂ ಪರಿಪೂರ್ಣನಲ್ಲವೆಂಬುವುದನ್ನು ಅದು ತೋರಿಸಿಕೊಡುತ್ತದೆ !

* ಒಬ್ಬ ಯಶಸ್ವಿ ವ್ಯಕ್ತಿಯ ಮೇಲೆ ಇತರರು ಎಸೆದ ನಿಂದನೆಗಳೆಂಬ ಇಟ್ಟಿಗೆಗಳಿಂದ, ಹೊಡೆತಕ್ಕೆ ಒಳಗಾದವನು ಅವುಗಳಿಂದಲೇ ದೃಢವಾದ ಅಡಿಪಾಯವನ್ನು ಹಾಕಿ, ಅದರಿಂದಲೇ ಬದುಕಲ್ಲಿ ಮೇಲೆ ಬರುವನೇ ಹೊರತು; ಯಾಕೆ ಹೀಗಾಯ್ತು ಅಂತ ಅಳುತ್ತಾ ಕುಳಿತುಕೊಳ್ಳುವುದಿಲ್ಲ.

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ