ಒಂದು ಒಳ್ಳೆಯ ನುಡಿ (40)

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕಷಾಯ, ಎಣ್ಣೆ ಇತ್ಯಾದಿ ತಯಾರಿಸಿ ತೆಗೆದುಕೊಳ್ಳುತ್ತೇವೆ. ಒಮ್ಮೊಮ್ಮೆ ಕಡಿಮೆಯಾಗುತ್ತದೆ. ಒಂದೆರಡು ದಿನಗಳಲ್ಲಿ ಕಡಿಮೆ ಆಗದಿದ್ದರೆ ಮತ್ತೆ ವೈದ್ಯರ ಬಳಿ ಹೋಗುವುದು ವಾಡಿಕೆ.
*ವ್ಯಾಧೇಸ್ತತ್ತ್ವಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ/
ಏತದ್ವೈದ್ಯಸ್ಯ ವೈದ್ಯತ್ವಂ ನವೈದ್ಯಃ ಪ್ರಭುರಾಯುಷಃ//*
ವೈದ್ಯರ ಹತ್ತಿರ ಹೋದಾಗ ,ವ್ಯಾಧಿಯ ಸ್ವರೂಪವನ್ನು ಸರಿಯಾಗಿ ನಾವು ಹೇಳಬೇಕು. ಸಮರ್ಪಕ ವೈದ್ಯನು ವ್ಯಾಧಿಯ ಸ್ವರೂಪವನ್ನು ತಿಳಿದು, ಬೇಕಾದ ಮದ್ದು ನೀಡುವನು. ಇವೆರಡನ್ನೂ ಅರಿತು ವ್ಯವಹರಿಸುವವನೇ ನಿಜವಾದ ವೈದ್ಯ. ಆದರೆ ಆಯುಷ್ಯದ ಒಡೆಯ ವೈದ್ಯನಲ್ಲ. ಆಯುಷ್ಯ ನೀಡುವವ ಮೇಲೊಬ್ಬ ಕುಳಿತು ಎಲ್ಲವನ್ನೂ ನೋಡುವ ಕಣ್ಣಿಗೆ ಕಾಣದ ಶಕ್ತಿ (ಭಗವಂತ).
ಹುಟ್ಟು -ಸಾವುಗಳ ಬಗ್ಗೆ ನಮಗೇನೂ ಹೇಳಲು ಸಾಧ್ಯವಿಲ್ಲ. ನಾವು ಮಾಡುವ ಕರ್ತವ್ಯ ಮಾಡೋಣ.
-ರತ್ನಾ. ಕೆ.ಭಟ್, ತಲಂಜೇರಿ
ಆಧಾರ;ಸರಳ ಸುಭಾಷಿತ